ವರುಣ ಕ್ಷೇತ್ರದಲ್ಲಿ ಜೆಡಿಎಸ್ ಪ್ರತ್ಯಸ್ತ್ರ..

Kannada News

30-10-2017

ಪುತ್ರ ಡಾ.ಯತೀಂದ್ರ ಅವರನ್ನು ವರುಣ ಕ್ಷೇತ್ರದಲ್ಲಿ ನಿಲ್ಲಿಸಿ, ಕುಟುಂಬ ರಾಜಕಾರಣಕ್ಕೆ ನಾಂದಿ ಹಾಡಲಿರುವ ಸಿಎಂ ಸಿದ್ದುಗೆ ಜೆಡಿಎಸ್ ಪ್ರತ್ಯಸ್ತ್ರವನ್ನು ಸಿದ್ಧಗೊಳಿಸಿದೆ. ಇಲ್ಲಿ ಮಾಜಿ ಸಚಿವ ಪಿ.ಜಿ.ಆರ್.ಸಿಂಧ್ಯಾರನ್ನು ದಳ ಕಣಕ್ಕಿಳಿಸುತ್ತಿದೆ. ಬಿಜೆಪಿ ಶಂಕರ ಬಿದರಿಯನ್ನು ನಿಲ್ಲಿಸಲು ಸಜ್ಜಾಗಿರುವುದರಿಂದ ವರುಣ ಕ್ಷೇತ್ರ ಕೂಡ ಪ್ರತಿಷ್ಟೆಯ ಕಣವಾಗುತ್ತಿದೆ.

ಸಿಎಂ ಸ್ಪರ್ಧಿಸುತ್ತಿರುವ ಚಾಮುಂಡೇಶ್ವರಿಯಲ್ಲಿ ಜೆಡಿಎಸ್ ನ ಜಿ.ಡಿ.ದೇವೇಗೌಡ ಬಿರುಸಿನ ಪ್ರಚಾರ ಆರಂಭಿಸಿದ್ದು, ಇವರಿಗೆ ಎಚ್.ವಿಶ್ವನಾಥ್, ಶ್ರೀನಿವಾಸ ಪ್ರಸಾದ್ ಕೈಜೋಡಿಸಿದ್ದಾರೆ. ಸಿದ್ದರಾಮಯ್ಯರನ್ನು ಸೋಲಿಸಲೇಬೇಕೆಂಬ ಹಠದಲ್ಲಿರುವ ವಿಶ್ವನಾಥ್ ಕೂಡ ಹುಣಸೂರಿನಲ್ಲಿ ಭರ್ಜರಿ ಪ್ರಚಾರ ಮಾಡುತ್ತಿದ್ದಾರೆ. ಇದರ ನಡುವೆಯೇ ಸಿದ್ದು ಪುತ್ರನಿಗೂ ಟಾಂಗ್ ಕೊಡಲು ಭರ್ಜರಿ ಸಿದ್ಧತೆಗಳಾಗಿವೆ ಎನ್ನಲಾಗಿದೆ.

 ವರದಿ: ಜಿ.ಆರ್.ಸತ್ಯಲಿಂಗರಾಜು

 ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ