ಶಾಸಕರೊಬ್ಬರ ಕಾರು ಚಾಲಕ ಕುಡಿದು ಗದ್ದಲ !

Kannada News

30-10-2017

ಮಡಿಕೇರಿ: ನಾಮಕರಣ ಸಮಾರಂಭದಲ್ಲಿ ಮದ್ಯಪಾನ ಮಾಡುತ್ತಾ ಅಸಭ್ಯವಾಗಿ ವರ್ತಿಸುತ್ತಿದ್ದ ಶಾಸಕ ಕೆ.ಜಿ.ಬೋಪಯ್ಯ ಅವರ ಕಾರಿನ ಚಾಲಕ ಮತ್ತವರ ಗೆಳೆಯರು ನಗರ ಸಭೆ ಅಧ್ಯಕ್ಷೆಯನ್ನು ಅವಾಚ್ಯವಾಗಿ ನಿಂದಿಸಿ ಗನ್ ತೋರಿಸಿದ ಘಟನೆ ನಡೆದಿದೆ.

ಮಡಿಕೇರಿಯ ಅಂಬೇಡ್ಕರ್ ಭವನದಲ್ಲಿ ನಾಮಕರಣ ಸಮಾರಂಭವೊಂದು ನಡೆಯುತ್ತಿತ್ತು, ಸಮಾರಂಭದಲ್ಲಿ ಕಟ್ಟಡದ ಮೊದಲ ಅಂತಸ್ತಿನಲ್ಲಿ ಕುಳಿತು ಮದ್ಯಪಾನ ಮಾಡುತ್ತಿದ್ದ ಯುವಕರ ಗುಂಪೊಂದು ಅಲ್ಲಿಂದ ಗ್ಲಾಸ್ ಹಾಗೂ ಬಾಟಲಿಗಳನ್ನು ಕೆಳಕ್ಕೆ ಬೀಳಿಸಿದ್ದಾರೆ. ಅದೇ ಕಟ್ಟಡದಲ್ಲಿ ಅಂಗಡಿ ನಡೆಸುತ್ತಿರುವ ನಗರಸಭೆ ಸದಸ್ಯೆ ವೀಣಾಕ್ಷಿ ಇದನ್ನು ಪ್ರಶ್ನಿಸಿದಾಗ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಈ ಸಂದಂರ್ಭದಲ್ಲಿ ನಗರಸಭೆ ಕೌನ್ಸಿಲರ್ ವೀಣಾಕ್ಷಿ ಹಾಗೂ ಸಮಾರಂಭದಲ್ಲಿ ಮದ್ಯಪಾನ ಮಾಡುತ್ತಿದ್ದ ಹುಡುಗರ ನಡುವೆ ಘರ್ಷಣೆ ಏರ್ಪಟ್ಟಿದ್ದು, ಈ ಸಂದರ್ಭ ಅಲ್ಲಿಗೆ ಬಂದ ವೀಣಾಕ್ಷಿ ಬೆಂಬಲಿಗನೊಬ್ಬ ಗನ್ ತೋರಿಸಿ ಬೆದರಿಸಿದ್ದಾನೆ.

 

 ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ