ಯಡಿಯೂರಪ್ಪ ಬಳಲಿದ್ದಾರಾ…?

Kannada News

30-10-2017

ಇತ್ತೀಚೆಗಷ್ಟೇ ಜ್ವರ ಮತ್ತು ಕೆಮ್ಮಿನಿಂದ ಅಸ್ವಸ್ಥರಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ವಾಪಸಾಗಿದ್ದ ಮಾಜಿ ಸಿಎಂ ಯಡಿಯೂರಪ್ಪನವರ ಆರೋಗ್ಯ ಇನ್ನೂ ಸರಿಹೋಗಿರುವಂತೆ ಕಂಡುಬರುತ್ತಿಲ್ಲ. ಪ್ರಧಾನಿ ನರೇಂದ್ರ ಮೋದಿಯವರ ಧರ್ಮಸ್ಥಳ, ಬೆಂಗಳೂರು, ಬೀದರ್ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದ ಯಡಿಯೂರಪ್ಪ, ಬಹುತೇಕ ಎಲ್ಲಾ ಕಾರ್ಯಕ್ರಮಗಳಲ್ಲೂ  ಬಗ್ಗಿಕೊಂಡೇ ನಿಂತಿದ್ದು, ತುಂಬಾ ನಿತ್ರಾಣಗೊಂಡಂತೆ ಕಂಡುಬರುತ್ತಿದ್ದರು.

ಸಾಕಷ್ಟು ವರ್ಷಗಳಿಂದಲೂ ಮಧುಮೇಹದ ಸಮಸ್ಯೆ ಅನುಭವಿಸುತ್ತಿರುವ ಬಿಎಸ್‌ವೈ, ದಿನಕ್ಕೆ 60 ಯೂನಿಟ್ ಇನ್ಸುಲಿನ್ ತೆಗೆದುಕೊಳ್ಳುತ್ತಾರೆ. ರಾಜ್ಯದಲ್ಲಿ ಮತ್ತೆ ಬಿಜೆಪಿಯನ್ನು ಅಧಿಕಾರಕ್ಕೆ ತಂದು ಮುಖ್ಯಮಂತ್ರಿಯಾಗಬೇಕು ಎಂಬ ಹಠಕ್ಕೆ ಬಿದ್ದು ಛಲಂದಕ ಮಲ್ಲನಂತೆ ಪ್ರಯತ್ನ ಮಾಡುತ್ತಿರುವ ಯಡಿಯೂರಪ್ಪನವರಿಗೆ, ಅವರ ಆರೋಗ್ಯ ಎಷ್ಟರ ಮಟ್ಟಿಗೆ ಸಾಥ್‌ ಕೊಡುತ್ತದೆ ನೋಡಬೇಕು. 


ಸಂಬಂಧಿತ ಟ್ಯಾಗ್ಗಳು

Kannada News Karnataka ಯಡಿಯೂರಪ್ಪ ಇನ್ಸುಲಿನ್


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ