ಐಜಿಪಿ ಅಲೋಕ್ ಕುಮಾರ್ ಗೆ ಕ್ಲೀನ್ ಚಿಟ್..?

Kannada News

28-10-2017

ಬೆಂಗಳೂರು: ರಾಜ್ಯದಲ್ಲಿ ಭಾರೀ ಸುದ್ದಿ ಮಾಡಿದ್ದ, ಬಹುಕೋಟಿ ಲಾಟರಿ ಹಗರಣದಲ್ಲಿ ಐಜಿಪಿ ಅಲೋಕ್‍ ಕುಮಾರ್ ಭಾಗಿಯಾದ ಆರೋಪ ಪ್ರಕರಣ ಕುರಿತಂತೆ, ಸಿಐಡಿ ತನಿಖೆ ಪೂರ್ಣಗೊಳಿಸಿದೆ. ಸಧ್ಯದಲ್ಲೇ ಈ ಸಂಬಂಧ ಗೃಹ ಇಲಾಖೆಗೆ ವರದಿಯೊಂದನ್ನು ಸಲ್ಲಿಸಲಾಗುತ್ತಿದೆ. 

ಲಾಟರಿ ಹಗರಣದ ಸೂತ್ರಧಾರಿ ಪಾರಿರಾಜನ್ ಜೊತೆಯಲ್ಲಿ ಐಜಿಪಿ ಅಲೋಕ್‍ ಕುಮಾರ್ ನಿಕಟ ಸಂಪರ್ಕ ಹೊಂದಿದ್ದಾರೆ ಮತ್ತು ಹಗರಣದಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಲಾಗಿತ್ತು. ಖುದ್ದು ಅಲೋಕ್‍ಕುಮಾರ್ ಅವರೇ ಪಾರಿರಾಜನ್ ನನ್ನ ಹಿತೈಷಿ ಎಂದು ಹೇಳಿಕೆ ನೀಡಿದ್ರು. ಈ ಹೇಳಿಕೆಯ ನಂತರ ಸರ್ಕಾರ ಅಲೋಕ್ ಕುಮಾರ್ ಅವರನ್ನು ಅಮಾನತಿನಲ್ಲಿ ಇಡಲಾಗಿತ್ತು. 

ಬಳಿಕ ಸಿಬಿಐ ಅಧಿಕಾರಿಗಳು ಪೊಲೀಸ್ ಮಹಾ ನಿರ್ದೇಶಕರು ಸೇರಿದಂತೆ ಹಗರಣದಲ್ಲಿ ಭಾಗಿಯಾಗಿದ್ದಾರೆ ಅನ್ನಲಾಗಿರೋ ಎಲ್ಲರನ್ನು ವಿಚಾರಣೆ ಮಾಡಿದ್ರು. ಈ ವೇಳೆ ಪಾರಿರಾಜನ್ ಮತ್ತು ಅಲೋಕ್‍ ಕುಮಾರ್ ನಡುವೆ ಬರೀ ಸ್ನೇಹ ಇತ್ತು ಅನ್ನೋ ವಿಚಾರ ತಿಳಿದಿದ್ದು, ಈ ಹಿನ್ನೆಲೆಯಲ್ಲಿ 'ಕ್ಲೀನ್‍ ಚಿಟ್' ನೀಡುತ್ತಿದ್ದಾರೆ ಎನ್ನಲಾಗಿದೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ