ಹೆಂಡ್ತಿಗಾಗಿ ಸ್ಟೇಡಿಯಂ ಖಾಲಿ..

Kannada News

28-10-2017

ನನ್ನ ಹೆಂಡ್ತಿ ಸುಂದರಿ, ಆಕೆ ಪ್ರಾಕ್ಟೀಸ್ ಮಾಡುವಾಗ ಕ್ರೀಡಾಂಗಣದಲ್ಲಿ ಬೇರ್ಯಾರೂ ಅಥ್ಲೀಟ್‍ಗಳು ಅಭ್ಯಾಸ ಮಾಡುವಂತಿಲ್ಲ ಎಂದು ಕ್ರೀಡಾ ಇಲಾಖೆ ನಿರ್ದೇಶಕ ಅನುಪಮ್ ಅಗರವಾಲ್ ಹೇಳಿದ್ದಾರಾ ಎಂಬ ಪ್ರಶ್ನೆಗಳು ಮೂಡಿವೆ..?

ಐಪಿಎಸ್ ಅಧಿಕಾರಿಯೂ ಆಗಿರುವ ಅಗರವಾಲ್ ಪತ್ನಿ, ಕಂಠೀರವ ಕ್ರೀಡಾಂಗಣದಲ್ಲಿ ಜಾಗಿಂಗ್‍ ಗೆ ಬಂದಿದ್ದು, ಇದೇ ಸಮಯದಲ್ಲಿ ಬಂದ ಕ್ರೀಡಾಳುಗಳನ್ನು ಸ್ಟೇಡಿಯಂನಿಂದ ಹೊರಹೋಗುವಂತೆ ಮಾಡಿ, ನನ್ನ ಹೆಂಡತಿಯ ಮುಖ ಇತರರು ನೋಡಬಾರದು, ಆಕೆ ಸುಂದರವಾಗಿದ್ದಾಳೆ ಎಂಬ ಕಾರಣವನ್ನು ಕೊಟ್ಟಿದ್ದಾರೆ ಎಂದು ಕೆಲವರು ಆರೋಪಿಸಿದ್ದಾರೆ. ಈ ಸಂಬಂಧ ದೂರು ಕೊಡಲು ಹೋದರೂ, ಆರಕ್ಷಕರು ಇದನ್ನು ಪಡೆಯಲಿಲ್ಲ ಎಂಬ ಅಳಲನ್ನ ತೋಡಿಕೊಂಡಿದ್ದು, ಸರ್ಕಾರೀ ಕ್ರೀಡಾಂಗಣದಿಂದ ಇತರರನ್ನು ತನ್ನ ಹೆಂಡತಿಗೋಸ್ಕರ ಹೊರಕ್ಕೆ ಕಳುಹಿಸುವ ಮೂಲಕ ಅಗರವಾಲ್ ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ.

ವರದಿ: ಜಿ.ಆರ್.ಸತ್ಯಲಿಂಗರಾಜು

 

 

 ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ