ಮಕ್ಕಳಿಬ್ಬರ ಅಪಹರಣ..

Kannada News

28-10-2017

ಬೆಂಗಳೂರು: ಮಕ್ಕಳಿಬ್ಬರನ್ನು ಅಪಹರಣ ಮಾಡಿರುವ ಆತಂಕದ ಘಟನೆ ಬೆಂಗಳೂರಿನ ಸಂಜಯ್‍ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಸಂಜಯ್ ನಗರದ ಪ್ರಶಾಂತ್ ಮತ್ತು ಶೈಲಜಾ ದಂಪತಿಯ ಮಕ್ಕಳಾದ ನಮತಾ ಹಾಗೂ ನಮೀತ್‍ ನನ್ನು ಅಪಹರಣ ಮಾಡಲಾಗಿದೆ ಎಂದು ತಿಳಿದುಬಂದಿದೆ.

ಪ್ರಕರಣದ ವಿವರ: ಅಕ್ಟೋಬರ್ 25ರಂದು ನಮತಾ ಹಾಗೂ ನಮೀತ್‍ ನನ್ನು ಅಪರಿಚಿತ ವ್ಯಕ್ತಿಯೊಬ್ಬ ತಿಂಡಿ ನೀಡುವುದಾಗಿ ಹೇಳಿ ನಗರದ ಭೂಪಸಂದ್ರಕ್ಕೆ ಕರೆದುಕೊಂಡು ಹೋಗಿದ್ದ, ಎಂದು ಆರೋಪಿಸಿ ಪ್ರಶಾಂತ್ ಮತ್ತು ಶೈಲಜಾ ದಂಪತಿ ಸಂಜಯ್ ನಗರ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡು ಪೊಲೀಸರು ಸಿಸಿ ಟಿವಿ ಕ್ಯಾಮೆರಾ ಪರಿಶೀಲಿಸಿದಾಗ ಅಪರಿಚಿತ ವ್ಯಕ್ತಿಯೊಬ್ಬ ಮಕ್ಕಳನ್ನು ಕರೆದುಕೊಂಡು ಹೋಗುವ ದೃಶ್ಯ ಸೆರೆಯಾಗಿದೆ. ಈ ಸಂಬಂಧ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ.

ಈ ಕುರಿತಂತೆ ಮಕ್ಕಳ ತಾಯಿ ಶೈಲಜಾ ಮಾತನಾಡಿ, ಭೂಪಸಂದ್ರದ ಮುಖ್ಯರಸ್ತೆಯ ಬಳಿ ಗುಜರಿ ಆಯುವ ವಿನೋದ್ ಎಂಬಾತ ಮಕ್ಕಳನ್ನು ಕರೆದುಕೊಂಡು ಹೋಗಿದ್ದಾನೆ, ಅಪಹರಣಕ್ಕೊಳಗಾದ ಮಗು ನಮತಾಗೆ ತಿಂಡಿ ತಿನಿಸು ನೀಡಿದ್ದು, ಆ ಮೂಲಕ ಹೆಬ್ಬಾಳ ಮಾರ್ಗವಾಗಿ ನಾಗವಾರಕ್ಕೆ ಕರೆದುಕೊಂಡು ಹೋಗಿರುವುದಾಗಿ ಆರೋಪಿಸಿದರು. ಈ ಮಾಹಿತಿಯನ್ನಾಧರಿಸಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

 


ಸಂಬಂಧಿತ ಟ್ಯಾಗ್ಗಳು

Kannada News Karnataka ಅಪಹರಣ ಸಂಜಯ್‍ ನಗರ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ