ಮಠಕ್ಕೆ ಮರಳಿದ ಶ್ರೀಗಳು

Kannada News

28-10-2017

ಉಡುಪಿ: ಉಡುಪಿಯ ಪರ್ಯಾಯ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಅವರು, ನಿನ್ನೆ ಸಂಜೆ ಆಸ್ಪತ್ರೆಯಿಂದ ಕೃಷ್ಣ ಮಠಕ್ಕೆ ಮರಳಿದ್ದಾರೆ. ಶ್ರೀ ಮಠದಲ್ಲಿ ಬೆಳಿಗ್ಗೆ ಲವಲವಿಕೆಯಿಂದ ಕಾರ್ಯ ಏರಂಭ ಮಾಡಿರುವ ಶ್ರೀಗಳು ಮುಂಜಾನೆ ಕೃಷ್ಣನಿಗೆ ಪೂಜೆ ಸಲ್ಲಿಸಿದರು.

ಚಿಕ್ಕ ಶಸ್ತ್ರ ಚಿಕಿತ್ಸೆ ಮಾಡಿದ್ದು, ಕೆಲ ದಿನಗಳ ಕಾಲ ವಿಶ್ರಾಂತಿ ತೆಗೆದುಕೊಳ್ಳುವಂತೆ ವೈದ್ಯರು ಸೂಚಿಸಿದ್ದಾರೆ. ಭಾರ ಎತ್ತದಂತೆ ಹಾಗೂ ಮೆಟ್ಟಿಲು ಹತ್ತಬಾರದು ಎಂದು ಹೇಳಿದ್ದಾರೆ. ಈಗ ನೋವಿಲ್ಲ, ಕೆಲ ದಿನಗಳ ಕಾಲ ಪೂಜೆ ಮಾಡುವುದಿಲ್ಲ. ಉಳಿದ ಎಲ್ಲ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತೇನೆ' ಎಂದು ಇದೇ ವೇಳೆ ಶ್ರೀಗಳು ತಿಳಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Kannada News Karnataka ವಿಶ್ವೇಶತೀರ್ಥ ಕೃಷ್ಣ ಮಠ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ