17 ಜನರನ್ನು ಕಚ್ಚಿದ ನಾಯಿ !

Kannada News

27-10-2017

ಚಿತ್ರದುರ್ಗ: 17 ಜನರಿಗೆ ಕಚ್ಚಿ ಗಾಯಗೊಳಿಸಿದ ನಾಯಿಯನ್ನು ಗ್ರಾಮಸ್ಥರೇ ಹೊಡೆದು ಸಾಯಿಸಿದ್ದಾರೆ. ಘಟನೆಯು ಚಿತ್ರದುರ್ಗದಲ್ಲಿ ನಡೆದಿದೆ. ಚಿತ್ರದುರ್ಗದ ಹಿರಿಯೂರು ತಾಲ್ಲೂಕಿನ ಕರಿ ಕೆಂಚನ ಹಟ್ಟಿ ಗ್ರಾಮದ ಮನೆಯೊಂದರಲ್ಲಿ, ಕಟ್ಟಿ ಹಾಕಿದ್ದ ವೇಳೆ ತಪ್ಪಿಸಿಕೊಂಡ ಬಂದ ನಾಯಿ, ಸಿಕ್ಕ ಸಿಕ್ಕವರ ಮೇಲೆ ಎರಗಿ 17 ಜನರನ್ನು ಕಚ್ಚಿ ಗಾಯಗೊಳಿಸಿದೆ. ಗ್ರಾಮದ ಶಶಿ ಎಂಬುವವರಿಗೆ ಸೇರಿದ ನಾಯಿಯಾಗಿದ್ದು, ಇಂದು ಬೆಳಿಗ್ಗೆ ಗ್ರಾಮದ 17 ಜನರನ್ನು ಕಚ್ಚಿ ಗಾಯಗೊಳಿಸಿ ಭೀತಿ ಹುಟ್ಡಿಸಿದ್ದು, ಇದರಿಂದ ಹೆದರಿ ಇನ್ನಷ್ಟು ಜನರಿಗೆ ಗಾಯಗೊಳಿಸುತ್ತದೆಂಬ ಭಯದಿಂದ ಗ್ರಾಸ್ಥರೇ ಹೊಡೆದು ಕೊಂದುಹಾಕಿದ್ದಾರೆ. ಇನ್ನು ಗಾಯಗೊಂಡವರು ಹಿರಿಯೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಯುತ್ತಿದ್ದು, ಇಬ್ಬರ ಸ್ಥಿತಿ ಗಂಭೀರವಾಗಿದೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ