ನಾಲ್ವರು ಕುಖ್ಯಾತ ಕಳ್ಳರ ಬಂಧನ

Kannada News

27-10-2017 374

ಬೆಂಗಳೂರು: ನಿರ್ಮಾಣ ಹಂತದ ಕಟ್ಟಡಗಳಲ್ಲಿನ ಕಬ್ಬಿಣದ ಸರಳುಗಳು, ಸೆಂಟ್ರಿಂಗ್ ಶೀಟ್‍ಗಳು ಇನ್ನಿತರ ಬೆಲೆ ಬಾಳುವ ವಸ್ತುಗಳನ್ನು ಕಳವು ಮಾಡುತ್ತಿದ್ದ, ನಾಲ್ವರು ಕುಖ್ಯಾತ ಕಳ್ಳರನ್ನು ಈಶಾನ್ಯ ವಿಭಾಗದ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ತಮಿಳುನಾಡಿನ ಧರ್ಮಪುರಿಯ ಗೋವಿಂದನ್ (38), ರಾಮು ಅಲಿಯಾಸ್ ಮೀನು (49), ಕೃಷ್ಣಗಿರಿಯ ಗುಣಶೇಖರ ಅಲಿಯಾಸ್ ಗುಣ (29), ಶಕ್ತಿವೇಲು (27) ಬಂಧಿತ ಆರೋಪಿಗಳಾಗಿದ್ದಾರೆ. ಬಂಧಿತರಿಂದ 15 ಲಕ್ಷ ಮೌಲ್ಯದ ಕಬ್ಬಿಣದ ಸರಳುಗಳು, ಸೆಂಟ್ರಿಂಗ್ ಶೀಟ್‍ಗಳು ಇನ್ನಿತರ ಕಟ್ಟಡ ನಿರ್ಮಾಣದ ಸಾಮಗ್ರಿಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಡಿಸಿಪಿ ಎಸ್. ಗಿರೀಶ್ ತಿಳಿಸಿದ್ದಾರೆ. ಆರೋಪಿಗಳಿಂದ ಕಳವು ಮಾಲುಗಳನ್ನು ಖರೀದಿಸುತ್ತಿದ್ದ, ಯಲಹಂಕ ಉಪನಗರದ ವೆಂಕಟೇಶ್ (31) ಹಾಗೂ ಅರುಳ್ ಕುಮಾರ್‍ನನ್ನು ಬಂಧಿಸಿ ಹೆಚ್ಚಿನ ವಿಚಾರಣೆ ನಡೆಸಲಾಗಿದೆ.

ಆರೋಪಿಗಳು ರಾಚೇನಹಳ್ಳಿಯ ರೈಲ್ವೆ ಪ್ಯಾರಲರ್ ರಸ್ತೆಯ ನಿರ್ಮಾಣ ಹಂತದ ಕಟ್ಟಡದಲ್ಲಿನ ಕಬ್ಬಿಣದ ಸರಳುಗಳನ್ನು ಕಳವು ಮಾಡಲು ಯತ್ನಿಸುತ್ತಿದ್ದಾಗ ಕಾರ್ಯಾಚರಣೆ ನಡೆಸಿದ ಸಂಪಿಗೆ ಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳ ಬಂಧನದಿಂದ 9 ಕಳವು ಪ್ರಕರಣಗಳು ಪತ್ತೆಯಾಗಿದೆ.

 ಸಂಬಂಧಿತ ಟ್ಯಾಗ್ಗಳು

Kannada News Karnataka ಕುಖ್ಯಾತ ಕಳ್ಳ ಧರ್ಮಪುರಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ