‘ಕೇಂದ್ರ ನಾಯಕರ ಮೇಲೂ ಎಫ್.ಐ.ಆರ್ ಇವೆ’

Kannada News

27-10-2017

ಬೆಂಗಳೂರು: ಸಚಿವ ಜಾರ್ಜ್ ವಿರುದ್ಧ ಸಿಬಿಐ ಎಫ್.ಐ.ಆರ್ ದಾಖಲು ವಿಚಾರಕ್ಕೆ ಸಂಬಂಧಿಸಿದಂತೆ ಕೆಪಿಸಿಸಿ ಕಾರ್ಯಾಧ್ಯಕ್ಷ ಎಸ್.ಆರ್.ಪಾಟೀಲ್ ಮಾತನಾಡಿದ್ದು, ಎಫ್.ಐ.ಆರ್ ದಾಖಲಾಗುತ್ತಿದ್ದಂತೆ ರಿಸೈನ್ ಮಾಡಬೇಕೆಂದಿಲ್ಲ ಎಂದಿದ್ದಾರೆ. ಕೇಂದ್ರದ ನಾಯಕರ ಮೇಲೂ ಎಫ್.ಐ.ಆರ್ ಇವೆ, ಅವರು ರಾಜೀನಾಮೆ ನೀಡಿದ್ದಾರೆಯೇ ಎಂದು ಪ್ರಶ್ನಿಸಿದ್ದಾರೆ. ಈಗಾಗಲೇ ಸಿಐಡಿ ಬಿ ರಿಪೋರ್ಟ್ ಕೊಟ್ಟಿದೆ, ಹೀಗಿರುವಾಗ ರಿಸೈನ್ ಮಾಡೋಕೆ ಆಗಲ್ಲ ಎಂದಿದ್ದು, ಬಿಜೆಪಿಯವರಿಗೆ ಬೇರೆ ಕೆಲಸ ಇಲ್ಲ ಇದನ್ನು ಮುಂದಿಟ್ಟುಕೊಂಡು ಹೊರಟಿದ್ದಾರೆ. ನಾವು ಹೋರಾಟಕ್ಕೆ ಇಳಿದ್ರೆ ಎಷ್ಟೋ ಕೇಂದ್ರ ಸಚಿವರು ರಾಜೀನಾಮೆ ಕೊಡಬೇಕಾಗುತ್ತದೆ ಎಂದು ಎಸ್.ಆರ್.ಪಾಟೀಲ್ ಹೇಳಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Kannada News Karnataka ಎಫ್.ಐ.ಆರ್ ಎಸ್.ಆರ್.ಪಾಟೀಲ್


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ