ಮಾತಿನ ಚಕಮಕಿ-ಮಹಿಳೆ ಆತ್ಮಹತ್ಯೆ !

Kannada News

27-10-2017

ಬೆಂಗಳೂರು: ಯಲಹಂಕದ ಚೌಡೇಶ್ವರಿ ಲೇಔಟ್‍ ನಲ್ಲಿ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ, ಮಹಿಳೆಯೊಬ್ಬರು ಒಂದು ವರ್ಷದ ಮಗುವನ್ನು ಮಲಗಿಸಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ದುರ್ಘಟನೆ ನಡೆದಿದೆ.

ಚೌಡೇಶ್ವರಿ ಲೇಔಟ್‍ನ ಅನುಷಾ(23)ಎಂದು ಆತ್ಮಹತ್ಯೆ ಮಾಡಿಕೊಂಡವರನ್ನು ಗುರುತಿಸಲಾಗಿದೆ. ಮೂರು ವರ್ಷದ ಹೊಂದೆ ಶಿವಕುಮಾರ್‍ ಎಂಬಾತನನ್ನು, ಪ್ರೀತಿಸಿ ವಿವಾಹವಾಗಿದ್ದು, ಅನುಷಾಗೆ ಒಂದು ವರ್ಷದ ಹೆಣ್ಣು ಮಗುವಿದೆ.

ನಿನ್ನೆ ರಾತ್ರಿ ಊರಿಗೆ ಹೋಗುವ ವಿಚಾರಕ್ಕೆ ಇಬ್ಬರ ಮಾತಿಗೆ ಮಾತು ಬೆಳೆದಿತ್ತು, ಮಾನಸಿಕವಾಗಿ ದುರ್ಬಲವಾಗಿದ್ದ ಆಕೆ ಅದನ್ನೇ ಮನಸಿಗೆ ಹಂಚಿಕೊಂಡಿದ್ದು, ನೇಣು ಹಾಕಿ ಸಾಯುವುದಾಗಿ ಪತಿಯನ್ನು ಹೆದರಿಸಿದ್ದಾಳೆ. ಯಾವಾಗಲೂ ನೇಣು ಹಾಕಿಕೊಳ್ಳುವುದಾಗಿ ಹೇಳುತ್ತಿದ್ದು ಅದನ್ನು ನಿರ್ಲಕ್ಷಿಸಿ ಶಿವಕುಮಾರ್ ಕೆಲಸಕ್ಕೆ ಹೋಗಿದ್ದಾರೆ. ಆದರೆ ಕೆಲಸ ಮುಗಿಸಿಕೊಂಡು ವಾಪಸ್ ಬರುವಷ್ಟರಲ್ಲಿ ಅನುಷಾ ಮಗುವನ್ನು ಮಲಗಿಸಿ ನೇಣುಹಾಕಿ ಹಾಕೊಕೊಂಡಿದ್ದಾರೆ.

ಎಚ್ಚರ ಗೊಂಡ ಮಗು ಜೋರಾಗಿ ಆಳುತ್ತಿರುವುದನ್ನು ಗಮನಿಸಿದ ಸ್ಥಳೀಯರು, ಮಗು ಇರುವ ಜಾಗಕ್ಕೆ ಬಂದು ನೋಡಿದಾಗ ಅನುಷಾಳ ದೇಹ ನೇಣು ಹಾಕಿರುವ ಸ್ಥಿತಿಯಲ್ಲಿ ಪತ್ತೆಯಾಗಿದೆ. ಕೆಲಸ ಮುಗಿಸಿಕೊಂಡು ಮನೆಗೆ ಬಂದ ಶಿವಕುಮಾರ್‍ ನನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದಾಗ ಆತ್ಮಹತ್ಯೆಯಲ್ಲಿ ಆತನ ಪಾತ್ರ ಇರದಿರುವುದು ಕಂಡು ಬಂದಿದೆ. ಯಲಹಂಕ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎಂದು ಡಿಸಿಪಿ ಗಿರೀಶ್ ತಿಳಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Kannada News Karnataka ಕೌಟುಂಬಿಕ ಕಲಹ ಆತ್ಮಹತ್ಯೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ