ಸಿದ್ದರಾಮಯ್ಯಗೆ ಜನಪ್ರಿಯತೆ ಇಲ್ಲ….!

Kannada News

27-10-2017

ಕರ್ನಾಟಕ ವಿಧಾನಸಭಾ ಚುನಾವಣೆಗೆ ಈಗಾಗಲೇ ಕ್ಷಣಗಣನೆ ಆರಂಭವಾಗಿದೆ. ಚುನಾವಣೆ ಹತ್ತಿರ ಬರುತ್ತಿರುವ ಈ ಸಮಯದಲ್ಲಿ ಸಹಜವಾಗಿಯೇ ಮುಂದಿನ ಮುಖ್ಯಮಂತ್ರಿ ಯಾರಾಗಬಹುದು ಎಂಬ ಬಗ್ಗೆ ಎಲ್ಲರಲ್ಲೂ ಒಂದು ಕುತೂಹಲವಿದ್ದು, ಆ ಬಗ್ಗೆ ಊಹೆಗಳೂ ನಡೆದಿರುತ್ತವೆ. ಇದೇ ನಿಟ್ಟಿನಲ್ಲಿ ಚಿಂತಿಸಿದ ಸೂಪರ್ ಸುದ್ದಿ, ಈ ಬಗ್ಗೆ ಒಂದು ಸಮೀಕ್ಷೆ ನಡೆಸಿದೆ. ಸಿದ್ದರಾಮಯ್ಯ, ಬಿ.ಎಸ್.ಯಡಿಯೂರಪ್ಪ ಮತ್ತು ಹೆಚ್‌.ಡಿ.ಕುಮಾರ ಸ್ವಾಮಿ, ಈ ಮೂವರಲ್ಲಿ, ಕರ್ನಾಟಕದ ಮುಂದಿನ ಮುಖ್ಯಮಂತ್ರಿಯಾಗಿ ನಿಮ್ಮ ಮತ ಯಾರಿಗೆ ಎಂಬ ನಮ್ಮ ಪ್ರಶ್ನೆಗೆ, ರಾಜ್ಯದ ಜನರಿಂದ ಕುತೂಹಲಕರವಾದ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಈ ಸಮೀಕ್ಷೆ ಆರಂಭದಲ್ಲಿ ಹಾಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಆಗ್ರಸ್ಥಾನದಲ್ಲಿದ್ದರು, ಅವರೇ ಮುಂದಿನ ಮುಖ್ಯಮಂತ್ರಿ ಅನ್ನುವುದು ಹೆಚ್ಚಿನ ಜನರ ಉತ್ತರವಾಗಿತ್ತು. ಆದರೆ, ಕೆಲವೇ ದಿನಗಳಲ್ಲಿ ಸಿದ್ದರಾಮಯ್ಯನವರಿಗಿಂತಲೂ ಹೆಚ್‌.ಡಿ.ಕುಮಾರ ಸ್ವಾಮಿಯವರ ಜನಪ್ರಿಯತೆ ಹೆಚ್ಚುತ್ತಾ ಹೋಯಿತು.

ಸೂಪರ್ ಸುದ್ದಿ ಕೇಳಿದ ಪ್ರಶ್ನೆಯನ್ನು ಸುಮಾರು 15 ಸಾವಿರಕ್ಕೂ ಹೆಚ್ಚು ಜನರು ಓದಿ ನೋಡಿದ್ದಾರೆ, ಅವರಲ್ಲಿ ಸುಮಾರು 850 ಜನರು ನಮ್ಮ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ್ದಾರೆ, ಇವರಲ್ಲಿ ಶೇಕಡ 55ರಷ್ಟು ಜನ, ಜಾತ್ಯತೀತ ಜನತಾದಳದ ಮುಖಂಡ ಹೆಚ್‌.ಡಿ.ಕುಮಾರ ಸ್ವಾಮಿ ಅವರನ್ನು ಆಯ್ಕೆ ಮಾಡಿದ್ದಾರೆ. ಸಿದ್ದರಾಮಯ್ಯನವರ ಪರವಾಗಿ ಶೇ.29ರಷ್ಟು ಮತ್ತು ಯಡಿಯೂರಪ್ಪನವರ ಪರ ಶೇ.16ರಷ್ಟು ಜನರು ತಮ್ಮ ಒಲವು ವ್ಯಕ್ತಪಡಿಸಿದ್ದಾರೆ.

ನಮ್ಮ ಪ್ರಶ್ನೆಗೆ, ಒಬ್ಬರು ಒಂದಕ್ಕಿಂತ ಹೆಚ್ಚು ಬಾರಿ ಮತ ಹಾಕುವ ಅಥವ ನಕಲು ಮತ ಹಾಕುವ ಅವಕಾಶ ಇಲ್ಲ. ಹೀಗಾಗಿ, ನಮಗೆ ದೊರೆತಿರುವ ಈ ಎಲ್ಲಾ ಮತಗಳು ನೈಜ ಪ್ರತಿಕ್ರಿಯೆಗಳಾಗಿವೆ. ಸೂಪರ್ ಸುದ್ದಿ ನಡೆಸಿದ ಈ ಸಮೀಕ್ಷೆಯಿಂದ, ರಾಜ್ಯದಲ್ಲಿ ಸಿದ್ದರಾಮಯ್ಯನವರ ಜನಪ್ರಿಯತೆ ಸಾಕಷ್ಟು ಕುಸಿದಿರುವುದು ಕಂಡುಬರುತ್ತದೆ. ಇದು ಸಿದ್ದರಾಮಯ್ಯನವರಿಗೆ ಮತ್ತು ಕಾಂಗ್ರೆಸ್ ಪಕ್ಷಕ್ಕೆ ಎಚ್ಚರಿಕೆ ಘಂಟೆಯಾಗಿದೆ. ಇನ್ನು ಕೆಲವೇ ದಿನಗಳಲ್ಲಿ ಈ ಸಮೀಕ್ಷೆ ಮುಕ್ತಾಯಗೊಳ್ಳುತ್ತಿದ್ದು, ಅಂತಿಮವಾಗಿ ಜನರ ಆಯ್ಕೆ ಯಾರು ಅನ್ನುವುದು ಸ್ಪಷ್ಟಗೊಳ್ಳಲಿದೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


H d kumarnna
  • Girish b k
  • Working
HDK
  • Chethan
  • Goveenment
Jai kumaranna
  • Ranjith m
  • Services
Kumar swamy is best cm in 2018
  • Sharanabasava
  • Student
KUMAR SWAMY
  • Abhigowda.s.m
  • Own business