ಕರ್ತವ್ಯ ಲೋಪ: ಮೂವರು ಪೇದೆಗಳ ಅಮಾನತು

Kannada News

27-10-2017

ಕಾರವಾರ: ಕರ್ತವ್ಯ ಲೋಪ ಹಿನ್ನೆಲೆಯಲ್ಲಿ ಕಾರವಾರ ಜಿಲ್ಲೆಯ ಅಂಕೋಲಾ ಠಾಣೆಯ ಪಿಎಸ್‍ಐ ಸೇರಿ ಮೂವರು ಪೊಲೀಸ್ ಪೇದೆಗಳನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿನಾಯಕ್ ಪಾಟೀಲ್ ಅಮಾನತು ಮಾಡಿದ್ದಾರೆ.

ಅಕ್ರಮ ಚಟುವಟಿಕೆ ತಡೆಯಲು ವಿಫಲವಾದ ಹಿನ್ನಲೆಯಲ್ಲಿ ಪಿಎಸ್‍ಐ ಓಂಕಾರಪ್ಪ, ಪೇದೆಗಳಾದ ವಸಂತ್ ನಾಯ್ಕ್, ಗಣಪತಿ ಗಾಂವಕರ್ ಹಾಗೂ ಗಿರೀಶ್ ಲಮಾಣಿಯನ್ನ ಅಮಾನತು ಮಾಡಿ ಆದೇಶ ಮಾಡಲಾಗಿದೆ. ಇತ್ತೀಚೆಗೆ ತಾಲೂಕಿನ ಅಂದ್ಲೆ ಗ್ರಾಮದಲ್ಲಿ ಇಸ್ಪೀಟ್ ಅಡ್ಡೆಯ ಮೇಲೆ ಎಸ್.ಪಿ ಸೂಚನೆ ಮೇರೆಗೆ ಡಿಸಿಐಬಿ ಪೊಲೀಸರು ದಾಳಿ ನಡೆಸಿದ್ದರು. ಈ ವೇಳೆ ಈ ಮೂರು ಅಧಿಕಾರಿಗಳ ಮೇಲೆ ಕರ್ತವ್ಯ ಲೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿನಾಯಕ್ ಪಾಟೀಲ್ ಕ್ರಮ ಕೈಗೊಂಡಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Kannada News Karnataka ಪಿಎಸ್‍ಐ ಡಿಸಿಐಬಿ ಪೊಲೀಸ್


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ