ಆಗಸದಿಂದ ಹಂಪಿ ವೀಕ್ಷಣೆಗೆ ಅವಕಾಶ !

Kannada News

27-10-2017

ಬೆಂಗಳೂರು: ಹಂಪಿ ಉತ್ಸವದ ಅಂಗವಾಗಿ ಬಳ್ಳಾರಿ ಜಿಲ್ಲಾಡಳಿತದಿಂದ ವಿವಿಧ ಕಾರ್ಯಕ್ರಮಗಳು ಏರ್ಪಾಟು ಆಗಿವೆ. ತುಂಗಾಭದ್ರಾ ನದಿ ತೀರದಲ್ಲಿ ನಾಳೆ ಸಂಜೆ 6.15ಕ್ಕೆ ಆರತಿ ಮಹೋತ್ಸವ ನಡೆಯಲಿದೆ. ಮತ್ತು ಇದೇ 29 ರಂದು ಹೊಸಪೇಟೆ ತಾಲ್ಲೂಕು ಹೊರಾಂಗಣ ಕ್ರೀಡಾಂಗಣದಲ್ಲಿ ಬೈಕ್ ಸಾಹಸ ಪ್ರದರ್ಶನ ಹಾಗೂ ಗಾಳಿಪಟ ಉತ್ಸವವನ್ನು ಹಮ್ಮಿಕೊಳ್ಳಲಾಗಿದೆ. ಅದೇ ದಿನ ಸಂಜೆ 5ರಿಂದ 6.30ರವೆಗೆ ಗೃಹರಕ್ಷಕದಳ ಮತ್ತು ನೊಪಾಸನ ಸಂಸ್ಥೆಯ ವತಿಯಿಂದ ಬೈಕ್ ಸಾಹಸ ಪ್ರದರ್ಶನ ಏರ್ಪಡಿಸಲಾಗಿದೆ.

ಹಂಪಿ ಪ್ರದೇಶವನ್ನು ಹೆಲಿಕಾಫ್ಟರ್‍ನಲ್ಲಿ ಕುಳಿತು ಆಗಸದಿಂದ ವೀಕ್ಷಿಸುವ ಹಂಪಿ ಬೈ ಸ್ಕೈ ಇದೇ 31 ರಿಂದ ನವೆಂಬರ್ 7 ವರೆಗೆ ನಡೆಯಲಿದೆ. ಇದರಲ್ಲಿ 8 ನಿಮಿಷ ಕಾಲ ಪ್ರಯಾಣಿಸಲು ಒಬ್ಬರು 2300 ರೂಪಾಯಿ ಟಿಕೆಟ್ ಪಡೆಯಬೇಕು. ನವೆಂಬರ್ 5 ರಂದು ಹೊಸಪೇಟೆಯ ತಾಲ್ಲೂಕು ಕ್ರೀಡಾಂಗಣದಲ್ಲಿ ಪ್ರಥಮ ಬಾರಿಗೆ ರಾಜ್ಯಮಟ್ಟದ ಶ್ವಾನ ಪ್ರದರ್ಶನವನ್ನು ಆಯೋಜಿಸಲಾಗಿದೆ. ಹೆಣ್ಣು ಮತ್ತು ಗಂಡು ತಳಿಗೆ ಪ್ರತ್ಯೇಕ ಪ್ರದರ್ಶನ ಇರುತ್ತದೆ. ಉತ್ತಮ ಪ್ರದರ್ಶನ ನೀಡಿದ ಶ್ವಾನಕ್ಕೆ ಪ್ರಶಸ್ತಿ ನೀಡಲಾಗುತ್ತದೆ.


ಸಂಬಂಧಿತ ಟ್ಯಾಗ್ಗಳು

Kannada News Karnataka ಹೆಲಿಕಾಫ್ಟರ್‍ ಬೈ ಸ್ಕೈ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ