ಅಪಘಾತ: ನೆರವಿಗೆ ಬಾರದ ಪೊಲೀಸರು !

Kannada News

27-10-2017

ಮಂಡ್ಯ: ಅಪಘಾತದಲ್ಲಿ ಗಾಯಗೊಂಡು ಒದ್ದಾಡುತ್ತಿದ್ದ ಮಹಿಳೆಯೊಬ್ಬರನ್ನು ನೋಡಿದ್ರು ಆಸ್ಪತ್ರೆಗೆ ಸಾಗಿಸದ ಪೊಲೀಸರು, ಮಾನವೀಯತೆ ಮರೆತ ದಾರುಣ ಘಟನೆ ನಡೆದಿದೆ. ಮಂಡ್ಯದ ಪಾಂಡವಪುರ ಪೊಲೀಸರು ಈ ರೀತಿಯ ವರ್ತನೆ ತೋರಿದ್ದು, ಜಿಲ್ಲೆಯ ಪಾಂಡವಪುರ ತಾಲ್ಲೂಕಿನ ಮಹದೇಶ್ವರ ಬಳಿ ಅಪಘಾತ ಸಂಭಿವಿಸಿ ಮಹಿಳೆಯೊಬ್ಬರು ನರಳಾಡುತ್ತಿದ್ದರು. ಗಾಯಗೊಂಡು ಒದ್ದಾಡುತ್ತಿದ್ದ ಮಹಿಳೆಯನ್ನು ಅಂಬ್ಯುಲೆನ್ಸ್ ಬರುವವರೆಗೂ ಸಹಾಯಕ್ಕೆ ಪೊಲೀಸರು ಮನಸ್ಸು ಮಾಡಲಿಲ್ಲ, ಮಹಿಳೆ ನೋವಿನಿಂದ ಒದ್ದಾಡುತ್ತಿದ್ದರೂ, ಪಕ್ಕದಲ್ಲೇ ಪೊಲೀಸ್ ವಾಹನ ನಿಲ್ಲಿಸಿಕೊಂಡಿದ್ದರು. ಅಪಘಾತದ ಸ್ಥಳದಲ್ಲಿ ಪೊಲೀಸ್ ವಾಹನ ಇದ್ದರೂ ಅಂಬ್ಯುಲೆನ್ಸ್ ಗಾಗಿ ಕಾದ ಪೊಲೀಸರ ಕ್ರಮಕ್ಕೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Kannada News Karnataka ಮಾನವೀಯತೆ ಪಾಂಡವಪುರ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ