ಕಳಪೆ ಊಟ ಬಿಲ್ ಗೆ ತಡೆ..?

Kannada News

27-10-2017

ಬೆಂಗಳೂರು: ವಿಧಾನಸೌಧದ ವಜ್ರಮಹೋತ್ಸವ ಸಮಾರಂಭದ ಮಧ್ಯಾಹ್ನದ ಊಟಕ್ಕೆ ದುಂದು ವೆಚ್ಚ ಮಾಡಿರುವ ವಿಷಯ ಇದೀಗ ಭಾರಿ ಚರ್ಚೆಗೆ ಗ್ರಾಸವಾಗಿದ್ದು,  ಊಟದ ಬಿಲ್ ಪಾವತಿ ತಡೆಹಿಡಿಯುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ನಿನ್ನೆ ನಡೆದ ಸಚಿವ ಸಂಪುಟ ಸಭೆಯ ಬಳಿಕ, ಅನೌಪಚಾರಿಕ ಮಾತುಕತೆ ವೇಳೆ ಈ ವಿಷಯ ಚರ್ಚೆಗೆ ಬಂದಿದೆ. ಊಟದ ವೆಚ್ಚಕ್ಕೆ 3 ಕೋಟಿ ಮೀಸಲಿಡಲಾಗಿದ್ದು, ಒಂದು ಊಟಕ್ಕೆ 3,600 ಬಿಲ್ ಮಾಡಲಾಗಿದೆ ಎಂಬ ಮಾಹಿತಿ ಇದೆ. ಆದರೆ, ತೀರಾ ಕಳಪೆಮಟ್ಟದ ಊಟ ಪೂರೈಸಿರುವ ಬಗ್ಗೆ ಕೆಲವು ಸಚಿವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ರಸ್ತೆ ಬದಿಯಲ್ಲಿ ಸಿಗುವಂಥ ಊಟವನ್ನು ಪೂರೈಸಲಾಗಿದ್ದು, ಅದಕ್ಕೆ ಅಷ್ಟೊಂದು ದುಬಾರಿ ವೆಚ್ಚ ನಮೂದಿಸಿರುವುದು ಸರಿಯಲ್ಲ ಎಂದು ವಾದಿಸಿರುವ ಸಚಿವರು, ಯಾವುದೇ ಕಾರಣಕ್ಕೂ ಬಿಲ್ ಪಾವತಿಸಬಾರದು ಎಂದು ಮುಖ್ಯಮಂತ್ರಿ ಮೇಲೆ ಒತ್ತಡ ಹೇರಿದ್ದಾರೆ ಎನ್ನಲಾಗಿದೆ.


ಸಂಬಂಧಿತ ಟ್ಯಾಗ್ಗಳು

Kannada News Karnataka ಕಳಪೆ ದುಬಾರಿ ವೆಚ್ಚ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ