ಮತ್ತೆ ಅಬ್ಬರಿಸಲಿದ್ದಾನೆ ಮಳೆರಾಯ !

Kannada News

27-10-2017

ಬೆಂಗಳೂರು: ಕೆಲ ದಿನಗಳಲ್ಲಿ ಸುಮ್ಮನಾಗಿದ್ದ ಮಳೆರಾಯ ಮತ್ತೆ ಬೆಂಗಳೂರಲ್ಲಿ ಅಬ್ಬರಿಸಲಿದ್ದಾನೆ. ಇಂದು ಮತ್ತು ನಾಳೆ ಮಹಾನಗರಿಯಲ್ಲಿ ಮಳೆಯಾಗಲಿದೆ ಎಂದು, ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ನೈರುತ್ಯ ಮುಂಗಾರು ಮಾರುತ ನಿರ್ಗಮಿಸಿದೆ, ಇನ್ನು ಹಿಂಗಾರು ಮಾರುತ ಪ್ರವೇಶಸಿಲಿದ್ದು, ಈ ಅವಧಿಯಲ್ಲಿ ಮಳೆ ಸರ್ವೆ ಸಾಮಾನ್ಯವಾಗಿದ್ದು, ಕೋರಮಂಗಲ, ಯಶವಂತಪುರ, ಯಲಹಂಕ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಳೆಯಾಗಲಿದೆ.

ಹಿಂಗಾರು ಮಳೆ ಪ್ರವೇಶಕ್ಕೂ ಮುನ್ನ, ಪರಿವರ್ತನಾ ಅವಧಿಯಲ್ಲಿ ಸಾಮಾನ್ಯವಾಗಿ ಸಣ್ಣ ಪ್ರಮಾಣದ ಮಳೆಯಾಗುತ್ತದೆ' ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ ಜಿ.ಎಸ್. ಶ್ರೀನಿವಾಸ ರೆಡ್ಡಿ ತಿಳಿಸಿದರು. ನಗರದಲ್ಲಿ ಕೋರಮಂಗಲ, ಯಶವಂತಪುರ, ಯಲಹಂಕ ಸುತ್ತಮುತ್ತಲಿನ ಪ್ರದೇಶಗಳಲ್ಲಿ ತುಂತುರು ಮಳೆಯಾಗುವ ಮುನ್ಸೂಚನೆ ಇದೆ' ` ನಗರದಲ್ಲಿ ಮೋಡ ಕವಿದ ವಾತಾವರಣ ಇರಲಿದ್ದು, ಗುಡುಗು ಸಹಿತ ಮಳೆಯಾಗಲಿದೆ' ಎಂದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ