ಹೊಸೂರು: ಪ್ಲೈಓವರ್ ಮೇಲೆ ಬೈಕ್ ನಿಷೇಧ..?

Kannada News

26-10-2017

ಬೆಂಗಳೂರು: ನಗರದ ಹೊರವಲಯದ ಹೊಸೂರು ರಸ್ತೆಯ ಎಲಿವೇಟೆಡ್ ಎಕ್ಸ್ ಪ್ರೆಸ್ ಪ್ಲೈಓವರ್ ರಸ್ತೆಯಲ್ಲಿ ದ್ವಿಚಕ್ರ ವಾಹನ ಸಂಚಾರ ನಿಷೇಧಿಸಲು ನಗರ ಸಂಚಾರ ಪೊಲೀಸರು ಮುಂದಾಗಿದ್ದಾರೆ. ಎಲಿವೇಟೆಡ್ ಎಕ್ಸ್ ಪ್ರೆಸ್ ಮೇಲುಸೇತುವೆ ರಸ್ತೆಯಲ್ಲಿ ದ್ವಿಚಕ್ರ ವಾಹನಗಳ ಅಪಘಾತಗಳು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಪ್ರಾಯೋಗಿಕವಾಗಿ  ಈ ರಸ್ತೆಯಲ್ಲಿ ದ್ವಿಚಕ್ರ ವಾಹನ ಸಂಚಾರ ನಿಷೇಧಿಸಲು ಸಂಚಾರ ಪೊಲೀಸರು ಚಿಂತನೆ ನಡೆಸಿದ್ದಾರೆ .

ಕಳೆದ ಹಲವು ದಿನಗಳಿಂದ ಈ ಮೇಲುಸೇತುವೆ ರಸ್ತೆಯಲ್ಲಿ ಸಾಕಷ್ಟು ಅಪಘಾತಗಳು ನಡೆಯುತ್ತಿದ್ದು, ಹಲವರು ಮೃತಪಟ್ಟಿರುವುದಲ್ಲದೇ ಕೆಲವು ಮಂದಿ ಗಾಯಗೊಂಡಿದ್ದಾರೆ, ಇದನ್ನು ಗಂಭೀರವಾಗಿ ಪರಿಗಣಿಸಿ ಎಕ್ಸ್ ಪ್ರೆಸ್ ಹೈವೇ ರಸ್ತೆಯ ವಿನ್ಯಾಸದ ಬಗ್ಗೆ ಸಂಪೂರ್ಣ ಅಧ್ಯಯನ ನಡೆಸಿ ಪ್ರಾಯೋಗಿಕವಾಗಿ ದ್ವಿಚಕ್ರ ವಾಹನಗಳ ಸಂಚಾರದ ಬಗ್ಗೆ ನಿರ್ಧರಿಸಲಾಗುವುದು ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ(ಸಂಚಾರ)ಹಿತೇಂದ್ರ ತಿಳಿಸಿದ್ದಾರೆ.

 ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


Yaro madkolo thappige elrigu Yake e paristhithi, wrong decision......
  • Anand
  • Company employ
Houdu edu ondu uthamavaada nirdaara.... Esto jana ola.. Uber.. Cab drivers galige sariyagi vaahana chalane madalu baruvudilla haagu fly over mele hosadagi drive madorige gabari jasthi... Uthammavada nirdara
  • . manjunath
  • Own business
ದಿಡೀರನೆ ಈರೀತಿ ಸಂದೇಶ ಪ್ರಕಟ ಮಾಡಿದರೆ ಪ್ರಾಯಣಿಕರಿಗೆ ತೋಂದರೆ ಯಾಗುತ್ತೆ ನೀವು ಈರೀತಿ ಮಾಡಬಹುದು ವೇಗತ ಮಿತಿ ಕಡಿಮೆ ಮಾಡಿ ಲೈನ್ ಪಾಲೋ ಯಾರು ಇವುಗಳನ್ನು ಅನುಸರಿಸುವುದಿಲ್ಲವೂ ಅವರಿಗೆ ನಿಷೇದಮಾಡಿದರೆ ಇತರರಿಗೂ ಬಯಾಬಂದು ವಾಹಗಳನ್ನೂ ನಿದಾನವಾಗಿ ಚಲಿಸುತ್ತಾರೆ ಒಂದು ಜಾಗದಲ್ಲಿ ಕಡ್ಡಾಯವಾಗಿ ವೇಗ ನಿಯಂತ್ರಣ ಅದಿಕಾರಿಗಳು ಇದ್ದರೆ ವೇಗವನ್ನು ಕಂಡಿತವಾಗಿ ಅತ್ತೂಟಿಗೆ ತರಬಹುದು
  • ವೈ ಶ್ರೀನಿವಾಸ್ ಚಿಕ್ಕಹಾಗಡೆ
  • ಪ್ರಧಾನಕಾರ್ಯದರ್ಶಿ DCC ಕಾಂಗ್ರೇಸ್ ಬೆಂಗಳೂರು ನಗರ
ಬೈಕ್ ನಿಷೇಧ ಒಂದೇ ಪರಿಹಾರ ಅಲ್ಲ, ಬದಲಾಗಿ ಬೈಕ್ ಗೆಂದೆ ಇನ್ನಷ್ಟು ಸುರಕ್ಷಾ ಕ್ರಮ ಹೆಚ್ಚಿಸಿ.. ಫ್ಲೈ ಓವರ್ ಬರಿ ಸಾಹೂಕಾರಿಗೆ ( ನಾಲ್ಕು ಚಕ್ರದವರ) ಅಲ್ಲ...
  • ಚಂದ್ರ ಶೇಖರ್
  • Technician