‘ಸಿದ್ದು ನಿಜ ಬಣ್ಣ ಬಯಲು ಮಾಡುತ್ತೇನೆ’-ಬಿಎಸ್ ವೈ

Kannada News

26-10-2017

ನಾವೆಲ್ಲ ಒಟ್ಟಾಗಿರೋಣ, 150 ಸ್ಥಾನ ಗೆಲ್ಲೋಣ, ಸಿದ್ದು ಸರ್ಕಾರದ ವಿರುದ್ಧದ ಮತ್ತಷ್ಟು ಹಗರಣವನ್ನು ದಾಖಲೆ ಸಮೇತ ಮುಂದಿನ ವಾರ ಬಿಡುಗಡೆ ಮಾಡೋಣ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಕರೆ ನೀಡಿದ್ದಾರೆ.

ಮೈಸೂರಿನಲ್ಲ ಪಕ್ಷದ ರೈತ ಮೋರ್ಚಾ ಹಮ್ಮಿಕೊಂಡಿರುವ ಸಮಾವೇಶದಲ್ಲಿ ಮಾತನಾಡಿದ ಅವರು, ಸಿದ್ದು ಕಮೀಷನ್ ಹೊಡೆಯುತ್ತಿದ್ದು, ಅವರು ಎಲ್ಲೇ ನಿಂತರೂ ಸೋಲಿಸಿ ಎಂದು ಹೇಳಿದ್ದು, ರಾಜ್ಯ ಸರ್ಕಾರದ ಇನ್ನಷ್ಟು ಹಗರಣಗಳಿವೆ, ದಾಖಲೆ ಸಮೇತ ಅದನ್ನ ಬಿಡುಗಡೆಮಾಡಿ, ಸಿದ್ದುವಿನ ನಿಜಬಣ್ಣ ಬಯಲು ಮಾಡುತ್ತೇನೆ ಎಂದರು.

ಪಕ್ಷದಲ್ಲಿ ನಾವೆಲ್ಲ ಒಗ್ಗೂಡಿ ಕೆಲಸ ಮಾಡಿದರೆ, ಮುಂದಿನ ಚುನಾವಣೆಯಲ್ಲಿ 150 ಸ್ಥಾನ ಗೆಲ್ಲುವುದು      ಕಷ್ಟವಾಗಲ್ಲ ಎಂದ ಅವರು, ಕೇಂದ್ರ ಸರ್ಕಾರ ಉತ್ತಮ ಕಾರ್ಯ ಮಾಡುತ್ತಿದೆ, ರಾಜ್ಯದಲ್ಲಿ ರೈತರು ಆತ್ಮಹತ್ಯೆ ಮಾಡಿಕೊಳ್ಳುವಂಥ ಸ್ಥಿತಿಯನ್ನು ಸಿದ್ದರಾಮಯ್ಯ ನಿರ್ಮಿಸಿದ್ದು, ರೈತರ ಸಂಕಷ್ಟ ಯಾರೂ ಕೇಳುತ್ತಿಲ್ಲ ಎಂದರು.

ಕೇಂದ್ರದ ದುಡ್ಡಲ್ಲಿ ಸಿದ್ದರಾಮಯ್ಯ ದುಂದುವೆಚ್ಚದ ಆಡಳಿತ ಮಾಡುತ್ತಿದ್ದಾರೆ, ಯಡಿಯೂರಪ್ಪ ಸರ್ಕಾರವೆಂದರೆ ಅಭಿವೃದ್ದಿ ನೆನಪಾಗುತ್ತೆ, ಸಿದ್ದು ಸರ್ಕಾರವೆಂದರೆ ನಿದ್ದೆ ನೆನಪಾಗುತ್ತೆ ಎಂದು ಸಂಸದ ಪ್ರತಾಪ ಸಿಂಹ ವಾಗ್ದಾಳಿಯನ್ನೂ ಮಾಡಿದರು. ಎಲ್ಲರೂ ಒಗ್ಗೂಡಿರುವ ಎಂದು ಕರೆ ನೀಡಿದ ಈ ಸಮಾರಂಭದಲ್ಲಿ, ರಾಜ್ಯ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷರೂ ಆಗಿರುವ, ಕಮಲ ಪಾಳೆಯ ಬಿಡಲು ಸಜ್ಜಾಗಿರುವ ವಿಜಯಶಂಕರ್ ಅನುಪಸ್ಥಿತಿ ಎದ್ದು ಕಾಣುತ್ತಿತ್ತು.

 


ಸಂಬಂಧಿತ ಟ್ಯಾಗ್ಗಳು

Kannada News Karnataka ರೈತ ಮೋರ್ಚಾ ಸಮಾವೇಶ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ