ಕಚೇರಿಯಲ್ಲೇ ಆತ್ಮಹತ್ಯೆಗೆ ಯತ್ನಿಸಿದ ಪಿಡಿಓ !

Kannada News

26-10-2017

ಚಿತ್ರದುರ್ಗ: ಗ್ರಾಮ ಪಂಚಾಯಿತಿ ಅಧ್ಯಕ್ಷೆ ಒತ್ತಡದಿಂದ, ತನ್ನನ್ನು ವರ್ಗಾವಣೆ ಮಾಡಿದ ತಾಲ್ಲೂಕು ಪಂಚಾಯತಿ ಕಾರ್ಯನಿರ್ವಹಣಾಧಿಕಾರಿ ಕ್ರಮದಿಂದ ಬೇಸತ್ತು ಪಿಡಿಓ ಒಬ್ಬರು ಆತ್ಮಹತ್ಯೆಗೆ ಯತ್ನಿಸಿರುವ ಘಟನೆಯು ಚಿತ್ರದುರ್ಗದಲ್ಲಿ ನಡೆದಿದೆ. ನಿನ್ನೆ ಸಾಯಂಕಾಲ ನಿದ್ರೆ ಮಾತ್ರೆ ಸೇವಿಸಿ ಕಚೇರಿಯಲ್ಲೇ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಚಿತ್ರದುರ್ಗದ ಬ್ಯಾಲಾಳು ಗ್ರಾಮ ಪಂಚಾಯತಿ ಪಿಡಿಓ ಸುಷ್ಮಾರಾಣಿ ಆತ್ಮಹತ್ಯೆಗೆ ಯತ್ನಿಸಿ ಅಸ್ವಸ್ಥಗೊಂಡಿದ್ದಾರೆ. ಇನ್ನು ತೀವ್ರ ಅಸ್ವಸ್ಥವಾಗಿರುವ ಸುಷ್ಮಾರಾಣಿ ಅವರನ್ನು, ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ದಾಖಲಿಲಾಗಿದ್ದು, ಪ್ರಜ್ಞಾಹೀನ ಸ್ಥಿತಿಯಲ್ಲೇ ಇದ್ದುದರಿಂದ, ಹೆಚ್ಚಿನ ಚಿಕಿತ್ಸೆಗಾಗಿ ದಾವಣಗೆರೆಯ ಎಸ್ಎಸ್ ಆಸ್ಪತ್ರೆಗೆ ರವಾನಿಸಿದ್ದಾರೆ.

 


ಸಂಬಂಧಿತ ಟ್ಯಾಗ್ಗಳು

Kannada News Karnataka ಗ್ರಾಮ ಪಂಚಾಯಿತಿ ಪಿಡಿಓ 


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ