ರೈತನ ಮೇಲೆ ಕತ್ತೆಕಿರುಬ ದಾಳಿ

Kannada News

26-10-2017

ತುಮಕೂರು: ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದ ರೈತನ ಮೇಲೆ ಕತ್ತೆಕಿರುಬ ದಾಳಿ ನಡೆಸಿ ಅಂಗೈಯನ್ನ ಕಚ್ಚಿ ಗಾಯಗೊಳಿಸಿರುವ ಘಟನೆ, ತುಮಕೂರಿನ ಗುಬ್ಬಿ ತಾಲ್ಲೂಕಿನ ಕಲ್ಲರ್ದಗೆರೆ ಗ್ರಾಮದ ಬಳಿ ನಡೆದಿದೆ.

ತಾಲ್ಲೂಕಿನ ನಿಟ್ಟೂರು ಹೋಬಳಿ ಕಲ್ಲರ್ದಗೆರೆ ಗ್ರಾಮದ ಬಳಿಯ ಶಶಿಫಾರ್ಮ್ ಮಾಲೀಕ ಚಿಕ್ಕ ಹುನುಮಂತಯ್ಯ (44) ರಾತ್ರಿ ನೀರು ಹಾಯಿಸಲು ಹೋದಾಗ ಈ ದುರ್ಘಟನೆ ನಡೆದಿದೆ. ತೋಟದ ಮನೆಯಲ್ಲಿ ಸಾಕಿದ್ದ ನಾಯಿಯ ಭೇಟೆಗೆ ಬಂದಿದ್ದ ಕತ್ತೆಕಿರುಬ, ದಾಳಿ ನಡೆಸಿದಾಗ ಬೊಗಳಿದ ನಾಯಿಯ ರಕ್ಷಣೆಗೆ ಧಾವಿಸಿದ ಚಿಕ್ಕ ಹನುಮಂತಯ್ಯ ಅವರ ಮೇಲೆ ದಾಳಿ ಮಾಡಿದೆ. ಈ ವೇಳೆ ಪ್ರತಿರೋಧಯೊಡ್ಡಿದ ಅವರ ಅಂಗೈಯನ್ನು ಸಿಗಿದು ನರವೊಂದು ತುಂಡರಿಸಿದೆ. ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದ ಅವರಿಗೆ ಗುಬ್ಬಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.

 


ಸಂಬಂಧಿತ ಟ್ಯಾಗ್ಗಳು

Kannada News Karnataka ಕತ್ತೆಕಿರುಬ ರಕ್ತಸ್ರಾವ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ