ಲಘು ಭೂ ಕಂಪನ: ಭಯದಲ್ಲಿ ಗ್ರಾಮಸ್ಥರು !

Kannada News

26-10-2017

ಬೀದರ್: ಆಗಿದ್ದಾಂಗ್ಗೆ ಭೂಮಿ ನಡುಗುವ ಅನುಭವದಿಂದ ಬೀದರ್  ಜಿಲ್ಲೆಯ ಭಾಲ್ಕಿ ತಾಲ್ಲೂಕಿನ ಟರನಹಳ್ಳಿ ಗ್ರಾಮದ ಜನತೆ ತತ್ತರಿಸಿ ಹೋಗಿದ್ದಾರೆ. ನಿನ್ನೆ ಬೆಳಿಗ್ಗೆ ಆದ ಕಂಪನದ ಅನುಭವದಿಂದ ಚೇತರಿಸಿಕೊಳ್ಳುವ ಮುನ್ನವೇ ತಡರಾತ್ರಿ ಎರಡನೇ ಬಾರಿಗೆ ಲಘು ಭೂಕಂಪನದ ಅನುಭವಾಗಿ ಗ್ರಾಮಸ್ಥರು ರಾತ್ರಿಯಿಡೀ ಗ್ರಾಮದ ದೇವಸ್ಥಾನದಲ್ಲಿ ಕಾಲಕಳೆದ ಘಟನೆಲ್ಲಿ ನಡೆದಿದೆ.

ತಡರಾತ್ರಿ ಸುಮಾರು 12:40ಕ್ಕೆ ಲಘು ಭೂಕಂಪನವಾಗಿದ್ದು ಜನರು ಭಯಗೊಂಡು ಮನೆಯಿಂದ ಓಡಿ ಬಂದಿದ್ದಾರೆ. ಎಲ್ಲಿ ನಿದ್ದೆ ಮಾಡಿದರೆ ಮತ್ತೆ ಭೂಕಂಪನವಾಗಿ ಅನಾಹುತವಾಗುತ್ತೋ ಎಂದು ಭಯಗೊಂಡ ಜನ ರಾತ್ರಿಯಿಡೀ ಗ್ರಾಮದ ದೇವಸ್ಥಾನದಲ್ಲಿ ಜಾಗರಣೆ ಮಾಡಿದ್ದಾರೆ. 5 ಸೆಕೆಂಡುಗಳ ಕಾಲ ನಡುಗಿದ ಭೂಮಿಗೆ ಮಹಿಳೆಯರು, ಮಕ್ಕಳು, ಹಿರಿಯ ನಾಗರಿಕರು, ಗ್ರಾಮಸ್ಥರು ಭಯದಲ್ಲಿ ನಿದ್ದೆ ಮಾಡದೆ ಕುಳಿತುಕೊಂಡೆ ಭಯದಲ್ಲಿ ಮುಂಜಾನೆ ವರೆಗೂ ಕಾಲ ಕಳೆದಿದ್ದಾರೆ.

ಇನ್ನು ಭೂಮಿ ಕಂಪನವಾದಾಗ ಸ್ಥಳಕ್ಕೆ ತಹಶೀಲ್ದಾರ್ ಮತ್ತು ಡಿವೈಎಸ್‍ಪಿ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಈ ರೀತಿ ಪದೇ ಪದೇ ಭೂಮಿ ನಡುತ್ತಿರುವುದಾದ್ರೂ ಏಕೆ ಎಂದು ಆತಂಕದಿಂದ ಗ್ರಾಮಸ್ಥರು ಪ್ರಶ್ನೆ ಮಾಡುತ್ತಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Kannada News Karnataka ಭಾಲ್ಕಿ ಲಘು ಭೂಕಂಪನ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ