ಕುವೆಂಪು ವಿವಿಯ ನಾಲ್ವರು ಸಿಬ್ಬಂದಿ ವಜಾ !

Kannada News

25-10-2017

ಶಿವಮೊಗ್ಗ: ಕುವೆಂಪು ವಿಶ್ವವಿದ್ಯಾಲಯದಲ್ಲಿ ನಡೆದಿದ್ದ ನಕಲಿ ಅಂಕಪಟ್ಟಿ ಹಗರಣ ಹಾಗೂ ಉತ್ತರ ಪತ್ರಿಕೆ ಬದಲಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಸಿಬ್ಬಂದಿಗಳನ್ನು ವಜಾಗೊಳಿಸಿದ್ದು, ನಾಲ್ವರಿಗೆ ಹಿಂಬಡ್ತಿ ನೀಡಿ ಕುಲಸಚಿವರು ಆದೇಶ ಹೊರಡಿಸಿದ್ದಾರೆ.

ವಿಶ್ವವಿದ್ಯಾನಿಲಯ ಪರೀಕ್ಷಾಂಗ ವಿಭಾಗದ ಕಿರಿಯ ಸಹಾಯಕರಾದ ಶಿವಕುಮಾರ್, ಸಿದ್ದಾಚಾರ್ಯ, ರಮೇಶ್ ಹಾಗೂ ಎಲ್.ರಾಮು ವಜಾಗೊಂಡವರು. ಸಹಾಯಕ ಕುಲಸಚಿವ ಎಂ.ಜೆ.ಪಾಲಾಕ್ಷಿನಾಯ್ಕ್, ಕಿರಿಯ ಸಹಾಯಕರಾದ ಪೀರ್ಯಾನಾಯ್ಕ್, ಎಚ್.ತಿಮ್ಮಯ್ಯ ಮತ್ತು ಮದನ್ ಹಿಂಬಡ್ತಿ ಪಡೆದವರಾಗಿದ್ದಾರೆ. ವಿಶ್ವವಿದ್ಯಾಲಯದ ಪರೀಕ್ಷಾಂಗ ವಿಭಾಗದಲ್ಲಿ ಹಲವು ವರ್ಷಗಳಿಂದ ನಡೆಯುತ್ತಿದ್ದ ನಕಲಿ ಅಂಕಪಟ್ಟಿ, ಉತ್ತರ ಪತ್ರಿಕೆ ಬದಲಿ ಮತ್ತು ಅಂಕ ತಿದ್ದುತ್ತಿದ್ದ ದೊಡ್ಡ ಹಗರಣ 2012ರ ಮೇ ನಲ್ಲಿ ಬಯಲಿಗೆ ಬಂದಿತ್ತು. ಇದೀಗ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ವಜಾಗೊಳಿಸಿದ್ದಾರೆ.



ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ