ಅಕ್ರಮ ರೀಫಿಲ್ಲಿಂಗ್: 116 ಸಿಲಿಂಡರ್ ವಶ !

Kannada News

25-10-2017

ಬೆಂಗಳೂರು: ಗೃಹ ಬಳಕೆಯ ಗ್ಯಾಸ್ ಸಿಲಿಂಡರ್‍ ಗಳನ್ನು ಕಮರ್ಷಿಯಲ್ ಸಿಲಿಂಡರ್‍ ಗಳಿಗೆ ರೀಫಿಲ್ಲಿಂಗ್ ಮಾಡಿ ಮಾರಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿ 116 ಸಿಲಿಂಡರ್‍ ಗಳನ್ನು ವಶಪಡಿಸಿಕೊಂಡಿದ್ದಾರೆ.

ಬಾಗೇಪಲ್ಲಿಯ ಚೇಳೂರಿನ ಸುನಿಲ್ ಕುಮಾರ್ (23), ಕನಕಪುರದ ಪೈಪ್‍ಲೈನ್ ರಸ್ತೆಯ ಶಿವರಾಜು (33), ಗವಿಪುರಂ ಗುಟ್ಟಳ್ಳಿಯ ಲಕ್ಷ್ಮಣ್ ಗೌಡ (35) ಬಂಧಿತ ಆರೋಪಿಗಳಾಗಿದ್ದಾರೆ. ಬಂಧಿತರಿಂದ ವಿವಿಧ ಕಂಪನಿಯ 116 ಗ್ಯಾಸ್ ಸಿಲಿಂಡರ್ ಗಳು, ರೀಫಿಲ್ಲಿಂಗ್ ರಾಡ್‍ಗಳು, ಗ್ಯಾಸ್ ತೂಕದ ಯಂತ್ರವನ್ನು ವಶಪಡಿಸಿಕೊಳ್ಳಲಾಗಿದೆ.

ಆರೋಪಿಗಳು ಉತ್ತರಹಳ್ಳಿ ಮುಖ್ಯರಸ್ತೆಯ ಕೋಡಿಪಾಳ್ಯದ ಗೋಡೌನ್‍ವೊಂದರಲ್ಲಿ ಗೃಹ ಬಳಕೆಯ ಗ್ಯಾಸ್ ಸಿಲಿಂಡರ್‍ ಗಳನ್ನು ಕಮರ್ಷಿಯಲ್ ಸಿಲಿಂಡರ್‍ ಗಳಿಗೆ ರೀಫಿಲ್ಲಿಂಗ್ ಮಾಡಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದು, ಖಚಿತ ಮಾಹಿತಿಯಾಧರಿಸಿ ದಾಳಿ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿ ಕೆಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ