ಡಿಎಲ್ ಇಲ್ಲದಿದ್ದರೆ ಪಾರ್ಕಿಂಗ್ ಇಲ್ಲ !

Kannada News

25-10-2017

ಬೆಂಗಳೂರು: ವಿದ್ಯಾರ್ಥಿಗಳು ರಸ್ತೆ ಅಪಘಾತಗಳಲ್ಲಿ ಬಲಿಯಾಗುತ್ತಿರುವುದು ಗಾಯಗೊಳ್ಳುತ್ತಿರುವುದು ಹೆಚ್ಚಾಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ನಗರ ಪೊಲೀಸರು, ಚಾಲನಾ ಪರವಾನಗಿ(ಡಿಎಲ್) ಇಲ್ಲದಿರುವ ವಿದ್ಯಾರ್ಥಿಗಳಿಗೆ ಬೈಕ್ ಹಾಗೂ ಕಾರುಗಳನ್ನು ಶಾಲಾ-ಕಾಲೇಜು ಆವರಣದಲ್ಲಿ ನಿಲ್ಲಿಸಲು ಯಾವುದೇ ಅವಕಾಶ ನೀಡಬಾರದು ಎಂದು ಆಡಳಿತ ಮಂಡಳಿಗಳಿಗೆ ಸೂಚನೆ ನೀಡಿದ್ದಾರೆ.

ಚಾಲನಾ ಪರವಾನಗಿ ಇಲ್ಲದಿದ್ದರೂ ಬಹಳಷ್ಟು ವಿದ್ಯಾರ್ಥಿಗಳು ಬೈಕ್ ಕಾರುಗಳನ್ನು ತಂದು ರಸ್ತೆಗಳಲ್ಲಿ ಮೋಜು ಮಸ್ತಿ ಮಾಡಲು ಹೋಗುತ್ತಾರೆ, ಈ ವೇಳೆಯಲ್ಲಿ ಸಾಕಷ್ಟು ಅಪಘಾತ ಪ್ರಕರಣಗಳು ಕೂಡ ನಡೆದಿರುವುದನ್ನು ಉಲ್ಲೇಖಿಸಿ, ಶಾಲಾ-ಕಾಲೇಜುಗಳ ಆಡಳಿತ ಮಂಡಳಿಗಳು ಪ್ರಚಾರ್ಯರಿಗೂ ಪೊಲೀಸರು ಕಟ್ಟುನಿಟ್ಟಿನ ಸೂಚನೆಯನ್ನು ನೀಡಿದ್ದಾರೆ

ಚಾಲನಾ ಪರವಾನಗಿ ಇಲ್ಲದಿರುವ ಯಾವೊಬ್ಬ ವಿದ್ಯಾರ್ಥಿಗೂ ಶಾಲಾ-ಕಾಲೇಜು ಆವರಣದಲ್ಲಿ ಬೈಕ್ ಕಾರುಗಳನ್ನು ಅವಕಾಶ ನೀಡಬಾರದು, ಒಂದು ವೇಳೆ ತಂದರೆ ಅವರನ್ನು ಮುಲಾಜಿಲ್ಲದೇ ಮನೆಗೆ ಕಳುಹಿಸಬೇಕು ಬೈಕ್ ಕಾರುಗಳನ್ನು ತರುವ ಎಲ್ಲಾ ವಿದ್ಯಾರ್ಥಿಗಳ ಚಾಲನಾ ಪರವಾನಗಿಯನ್ನು ತಪಾಸಣೆ ನಡೆಸಬೇಕು ಎಂದು ಸೂಚಿಸಿದ್ದಾರೆ.

ಶಿಕ್ಷಣ ಇಲಾಖೆಗೆ 2016 ಜುಲೈ 30ರಂದೇ ಈ ಸುತ್ತೋಲೆ ಹೊರಡಿಸಲಾಗಿದ್ದು, ಇದೀಗ ಕಟ್ಟುನಿಟ್ಟಾಗಿ ಜಾರಿಯಾಗುವ ಮುನ್ಸೂಚನೆ ಕಂಡು ಬರುತ್ತಿದೆ. ಎಲ್ಲಾ ಶಾಲಾ-ಕಾಲೇಜುಗಳು ಸ್ವಂತ ವಾಹನದಲ್ಲಿ ಬರುವ ವಿದ್ಯಾರ್ಥಿಗಳ ಚಾಲನ ಪರವಾನಗಿ ಬಗ್ಗೆ ಪರಿಶೀಲನೆ ನಡೆಸುತ್ತಿವೆ ಎಂದು ತಿಳಿದುಬಂದಿದೆ.


ಸಂಬಂಧಿತ ಟ್ಯಾಗ್ಗಳು

Kannada News Karnataka ಶಾಲಾ-ಕಾಲೇಜು ಡಿಎಲ್


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ