ಚಿಕಿತ್ಸೆಗಾಗಿ ಬಾಗಲಕೋಟೆಗೆ ನಟ ಸತ್ಯಜಿತ್ !

Kannada News

25-10-2017

ಬಾಗಲಕೋಟೆ: ಚಿತ್ರರಂಗದಲ್ಲಿ ಪೋಷಕ ನಟರ ಪಾತ್ರಧಾರಿಗಳಿಗೆ ಯಾವುದೇ ರೀತಿಯ ಆರ್ಥಿಕ ಭದ್ರತೆ ಇಲ್ಲ ಎನ್ನುವುದಕ್ಕೆ ಉದಾಹರಣೆ ನಟ ಸತ್ಯಜಿತ್. 33 ವರ್ಷಗಳ ಕಾಲ 580ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ ನಟ ಸತ್ಯಜಿತ್' ಕಷ್ಟದಲ್ಲಿದ್ದಾಗ ಚಿತ್ರರಂಗ ಅವರನ್ನು ದೂರತಳ್ಳಿದೆ. ಗ್ಯಾಂಗ್ರಿನ್' ನಿಂದ ಒಂದು ಕಾಲು ಕಳೆದು ಕೊಂಡ ನಟ, ಕಡಿಮೆ ವೆಚ್ಚದಲ್ಲಿ ಚಿಕಿತ್ಸೆ ದೊರೆಯುತ್ತದೆ ಎಂಬ ಕಾರಣಕ್ಕೆ ಬೆಂಗಳೂರು ಬಿಟ್ಟು ಬಾಗಲಕೋಟೆಗೆ ಆಗಮಿಸಿದ್ದಾರೆ.

ಗ್ಯಾಂಗ್ರಿನ್' ನಿಂದಾಗಿ ಎಡಗಾಲು ಕಳೆದುಕೊಂಡಿರುವ ನಟ ಕೃತಕ ಕಾಲು ಜೋಡಿಸಿಕೊಳ್ಳುವ ಯೋಚನೆ ಮಾಡಿದ್ದಾರೆ. ಆದರೆ ಈ ಕೃತಕ ಕಾಲಿನ ಜೋಡಣಾ ಚಿಕಿತ್ಸೆಗೆ ಬೆಂಗಳೂರಿನಲ್ಲಿ  4.60 ಲಕ್ಷ ರೂ ವೆಚ್ಚವಾದರೆ, ಅದೇ ಮಾದರಿಯಲ್ಲಿ ಜರ್ಮನ್ ಕಂಪನಿಯ ಕೃತಕ ಕಾಲುನ್ನು ಬಾಗಲಕೋಟೆ ನಗರದಲ್ಲಿ 2.20ಲಕ್ಷ ರೂ ವೆಚ್ಚವಾಗುತ್ತದೆ. ಈ ಮಾಹಿತಿಯನ್ನು ಪಡೆದು ಕೊಂಡ ನಟ, ಆರ್ಥಿಕ ಬಿಕ್ಕಟ್ಟಿನ ಸ್ಥಿತಿಯಲ್ಲಿ ಇಷ್ಟು ಹಣ ಉಳಿತಾಯವಾದರೆ ಎಷ್ಟೋ ಅನುಕೂಲವಾಗುತ್ತದೆ ಎಂದು ತೀರ್ಮಾನಿಸಿ ದೂರದೂರಿನಿಂದ ಜಿಲ್ಲೆಯ ಆಸ್ಪತ್ರೆಗೆ ಆಗಮಿಸಿ ಇಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

 

 


ಸಂಬಂಧಿತ ಟ್ಯಾಗ್ಗಳು

Kannada News Karnataka ಬಾಗಲಕೋಟೆ ಸತ್ಯಜಿತ್


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ