‘ರಾಷ್ಟ್ರಪತಿ ಭಾಷಣ ಸರ್ಕಾರ ಬರೆದುಕೊಟ್ಟದ್ದು'

Kannada News

25-10-2017

ಬೆಂಗಳೂರು: ರಾಜ್ಯದಲ್ಲಿ ಕೆಟ್ಟ ಸರ್ಕಾರವಿದ್ದರೂ ಉತ್ತಮ ಸರ್ಕಾರ ಎಂದು ರಾಷ್ಟ್ರಪತಿಗಳಿಂದ ಹೇಳಿಸಲಾಗಿದೆ ಎಂದು ವಿಧಾನ ಪರಿಷತ್ ನ ವಿರೋಧ ಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ ಟೀಕಿಸಿದ್ದಾರೆ. ವಿಧಾನಸೌಧದ ವಜ್ರ ಮಹೋತ್ಸವದ ಅಂಗವಾಗಿ ನಡೆದ ರಾಜ್ಯ ವಿಧಾನಮಂಡಲದ ಜಂಟಿ ಅಧಿವೇಶನದಲ್ಲಿ ಭಾಗವಹಿಸಿದ ನಂತರ, ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಷ್ಟ್ರಪತಿ ಅವರು ರಾಜ್ಯ ಸರ್ಕಾರ ಬರೆದುಕೊಟ್ಟಿರುವ ಭಾಷಣವನ್ನು ಜಂಟಿ ಅಧಿವೇಶನದಲ್ಲಿ ಓದಿದ್ದಾರೆ ಅಷ್ಟೆ ಎಂದರು.

ರಾಜ್ಯ ಸರ್ಕಾರ ಭಾಷಣದ ಪ್ರತಿಯನ್ನು ತಡವಾಗಿ ನೀಡಿದ್ದರಿಂದ ರಾಷ್ಟ್ರಪತಿಗಳು ಜಂಟಿ ಅಧಿವೇಶನಕ್ಕೆ ಆಗಮಿಸುವುದು ವಿಳಂಬವಾಯಿತು ಎಂದು ಆಕ್ಷೇಪಿಸಿದರು. ವಜ್ರ ಮಹೋತ್ಸವ ಆಚರಣೆ ಗೊಂದಲಮಯವಾಗಿದೆ, ಆಚರಣೆಗೆ ಮಾಡುವ ವೆಚ್ಚದ ಬಗ್ಗೆಯೂ ಕೂಡ ಆಕ್ಷೇಪ ವ್ಯಕ್ತವಾಗಿತ್ತು ಎಂದು ಹೇಳಿದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ