ರಾಜ್ಯ ಸರಕಾರಿ ನೌಕರರ ಪ್ರತಿಭಟನೆ !

25-10-2017 378
ಬೆಂಗಳೂರು: ಕೇಂದ್ರ ಸರಕಾರಿ ನೌಕರರಂತೆ ರಾಜ್ಯ ಸರಕಾರದ ನೌಕರರಿಗೂ ಸಮಾನ ವೇತನ ನೀಡಬೇಕೆಂದು ಆಗ್ರಹಿಸಿ ಇದೇ 28ರಂದು ನಗರದ ಆನಂದರಾವ್ ವೃತ್ತದ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ನಡೆಸುವುದಾಗಿ ರಾಜ್ಯ ಸರಕಾರಿ ನೌಕರರ ಸಂಘಗಳ ಒಕ್ಕೂಟದ ಅಧ್ಯಕ್ಷ ಮಹದೇವಯ್ಯ ಮಠಪತಿ ಹೇಳಿದರು.
ವೇತನ ಆಯೋಗ ವರದಿ ನೀಡಲು ಕಾಲಾವಕಾಶ ಕೋರಿರುವುದರಿಂದ ಅನ್ಯಾಯವಾಗಿದೆ. ರಾಜ್ಯ ಸರಕಾರವು 2017ರ ಜನವರಿಯಿಂದ ಪೂರ್ವಾನ್ವಯವಾಗುವಂತೆ ಎಲ್ಲ ನೌಕರರಿಗೂ ಮತ್ತು ಪಿಂಚಣಿದಾರರಿಗೂ ಶೇ.30ರಷ್ಟು ಮಧ್ಯಂತರ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದರು
ಒಂದು ಕಮೆಂಟನ್ನು ಹಾಕಿ