ಮದ್ಯ ಮಾರುತ್ತಿದ್ದವರಿಗೆ ಮಹಿಳೆಯರಿಂದ ಗೂಸ !

Kannada News

25-10-2017

ಗದಗ: ಅಕ್ರಮ ಮದ್ಯ‌ ಮಾರಾಟ ಮಾಡುತ್ತಿದ್ದ ಮನೆಗೆ ಗ್ರಾಮದ ಮಹಿಳೆಯರು ಮುತ್ತಿಗೆ ಹಾಕಿದ ಘಟನೆಯು, ಗದಗ ತಾಲ್ಲೂಕಿನ ಹಾತಲಗೇರಿ ಗ್ರಾಮದಲ್ಲಿ ನಡೆದಿದೆ.

ಸೂರಪ್ಪ ಗದಗ ಹಾಗೂ ಬಸವರಾಜ ಮಾನೇದ ಎಂಬುವರ ಮನೆಯಲ್ಲಿ ಅಕ್ರಮ‌ ಮದ್ಯ ಮಾರಾಟ ಮಾಡುತ್ತಿದ್ದರು. ಗ್ರಾಮದಲ್ಲಿ ಬೆಳ್ಳಂ ಬೆಳಿಗ್ಗೆಯೇ ಮದ್ಯ ಮಾರಾಟ ಮಾಡುತ್ತಿದ್ದ ಇವರ ಮನೆಗೆ ದಾಳಿ ಮಾಡಿದ ಗ್ರಾಮದ ಮಹಿಳೆಯರು, ಮದ್ಯ ಮಾರಾಟಮಾಡುತ್ತಿದ್ದ ದಂಧೆಕೋರರನ್ನು ಹಿಗ್ಗಾಮುಗ್ಗ ಥಳಿಸಿದ್ದಾರೆ. ಈ ವೇಳೆ ಸಂಗ್ರಹಿಸಿಟ್ಟಿದ್ದ ಮದ್ಯವನ್ನು ಸುರಿದು ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು. ಮದ್ಯ ಮಾರಾಟದಿಂದ ಗ್ರಾಮದಲ್ಲಿ ನೆಮ್ಮದಿ ಹಾಳಾಗಿದ್ದು, ಇದರಿಂದ ತಮ್ಮ ಗಂಡಂದಿರು ಪ್ರತಿ ದಿನ ಕುಡಿದು ಬಂದು, ಮನೆಯಲ್ಲಿ ರಂಪಾಟ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

 

 

 ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ