ವಜ್ರ ಮಹೋತ್ಸವ: ಶಾಸಕರಿಗೆ ಪಾಸ್ ಕಿರಿಕಿರಿ

Kannada News

25-10-2017

ಬೆಂಗಳೂರು: ವಿಧಾನಸೌಧದ ವಜ್ರ ಮಹೋತ್ಸವಕ್ಕೆ ಶಾಸಕರನ್ನೂ ಒಳಗೆ ಬಿಡಲು ಪೊಲೀಸರು ತಕರಾರು ತೆಗೆದ ಘಟನೆ ನಡೆಯಿತು. ಕೆಂಗಲ್ ಹನುಮಂತಯ್ಯ ಪ್ರತಿಮೆ ಇರುವ ಪ್ರವೇಶದ್ವಾರದಲ್ಲಿ ಸವದತ್ತಿ ಕ್ಷೇತ್ರದ ಶಾಸಕ ಆನಂದ್ ಮಾಮನಿ ಅವರು ವಿಧಾನಸೌಧ ಪ್ರವೇಶಿಸಲು ಬಂದರು, ಆದರೆ ಅವರಿ ಬಳಿ ವಿಶೇಷ ಪಾಸ್ ಇಲ್ಲದ ಕಾರಣ ಪೊಲೀಸರು ಒಳಬಿಡಲಿಲ್ಲ. ಈ ಹಿನ್ನೆಲೆಯಲ್ಲಿ ಪೊಲೀಸರು ಮತ್ತು ಶಾಸಕರ ನಡುವೆ ಜಟಾಪಟಿ ನಡೆಯಿತು.

ಶಾಸಕರ ಐಡಿ ಕಾರ್ಡ್ ತೋರಿಸಿದರೂ ಪೊಲೀಸರು ಒಳಬಿಡಲಿಲ್ಲ. ನಂತರ ಶಾಸಕ ಮಾಮನಿ ವಾಪಸ್ ಹೋಗುವ ಬೆದರಿಕೆ ಹಾಕಿದ ಮೇಲೆ ಪೊಲೀಸರು ಪ್ರವೇಶಕ್ಕೆ ಅವಕಾಶ ನೀಡಿದರು. ವಜ್ರ ಮಹೋತ್ಸವದ ಕಾರ್ಯಕ್ರಮಕ್ಕೆ ವಿತರಿಸಿದ್ದ ಪಾಸ್‍ಗಳನ್ನು ಸಚಿವಾಲಯದ ಸಿಬ್ಬಂದಿ ವಿಧಾನಸೌಧದ ಒಳಗಡೆ ವಿತರಣೆ ಮಾಡುತ್ತಿದ್ದರಿಂದ ಪ್ರವೇಶದ್ವಾರದಲ್ಲಿ ಶಾಸಕರಿಗೆ ಕಿರಿಕರಿ ಉಂಟಾಗಿತ್ತು. ಇದರಿಂದ ಭದ್ರತಾ ನೆಪದಲ್ಲಿ ಶಾಸಕರ ಜೊತೆ ಪೊಲೀಸರು ವಾಗ್ವಾದಕ್ಕೆ ಇಳಿಯುವಂತಾಗಿತ್ತು.

 

 


ಸಂಬಂಧಿತ ಟ್ಯಾಗ್ಗಳು

Kannada News Karnataka ಸವದತ್ತಿ ವಜ್ರ ಮಹೋತ್ಸವ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ