ಟಿಪ್ಪುವನ್ನು ಹೊಗಳಿದ ರಾಷ್ಟ್ರಪತಿ

Kannada News

25-10-2017

ಬೆಂಗಳೂರು: ವಿಧಾನಸೌಧದ ವಜ್ರಮಹೋತ್ಸವ ಸಂದರ್ಭದಲ್ಲಿ ಉಭಯ ಸದನವನ್ನು ಉದ್ದೇಶಿಸಿ ಮಾತನಾಡಿದ ರಾಷ್ಟ್ರಪತಿಗಳು ಕನ್ನಡ ನಾಡು, ನುಡಿ ಹಾಗೂ ಸಂಸ್ಕೃತಿಯನ್ನು ಹೊಗಳುವ ಜೊತೆಗೆ ಟಿಪ್ಪು ಸುಲ್ತಾನ್ ಹೆಸರನ್ನೂ ಕೂಡ ಪ್ರಸ್ತಾಪಿಸಿದರು. ಟಿಪ್ಪು ಒಬ್ಬ ಅಸಾಧಾರಣ ಶೌರ್ಯ ಹೊಂದಿದ್ದ ಮಹಾನ್ ವ್ಯಕ್ತಿ ಎಂದು ಹೊಗಳಿದರು. ಇದು ಟಿಪ್ಪು ಜಯಂತಿಯನ್ನು ವಿರೋಧಿಸುತ್ತಿರುವ ಬಿಜೆಪಿ ಸದಸ್ಯರಿಗೆ ಮುಜುಗರ ತಂದಿಟ್ಟಿತು.

ಟಿಪ್ಪು ಹೆಸರನ್ನು ಪ್ರಸ್ತಾಪಿಸಿ ಹೊಗಳಿದ ಕೂಡಲೇ ಕಾಂಗ್ರೆಸ್ ಸದಸ್ಯರು ದೀರ್ಘ ಕಾಲ ಮೇಜು ಕುಟ್ಟಿ ಸ್ವಾಗತಿಸಿದರು. ಆದರೆ, ಬಿಜೆಪಿ ಸದಸ್ಯರು ಯಾವುದೇ ಪ್ರತಿಕ್ರಿಯೆ ನೀಡದೆ ಸುಮ್ಮನಿದ್ದರು. ರಾಷ್ಟ್ರಪತಿಗಳು ಟಿಪ್ಪು ಸುಲ್ತಾನ್ ಹೆಸರನ್ನು ಪ್ರಸ್ತಾಪಿಸಿದ್ದು ಬಿಜೆಪಿ ಸದಸ್ಯರಲ್ಲಿ ಮುಜುಗರ ಉಂಟುಮಾಡಿದ್ದು ಸ್ಪಷ್ಟವಾಗಿ ಕಾಣುತ್ತಿತ್ತು.

ಕನ್ನಡ ನಾಡಿನ ಬೆಳವಣಿಗೆಗೆ ಕಾಣಿಕೆ ನೀಡಿದ ಮಹನೀಯರ ಪಟ್ಟಿಯಲ್ಲಿ ದೇವೇಗೌಡರ ಹೆಸರನ್ನು ಪ್ರಸ್ತಾಪಿಸಲು ರಾಷ್ಟ್ರಪತಿಗಳು ಮರೆತಿದ್ದರು. ಸ್ವತಂತ್ರ್ಯಾನಂತರ ಬಂದ ಎಲ್ಲಾ ಮುಖ್ಯಮಂತ್ರಿಗಳ ಹೆಸರನ್ನು ಪ್ರಸ್ತಾಪಿಸಿದ ಕೋವಿಂದ್, ದೇವೇಗೌಡರ ಹೆಸರನ್ನು ಉಲ್ಲೇಖಿಸಲಿಲ್ಲ. ಅದಕ್ಕೆ ಜೆಡಿಎಸ್ ಮುಖಂಡ ವೈ.ಎಸ್.ವಿ ದತ್ತಾ ಆಕ್ಷೇಪ ವ್ಯಕ್ತಪಡಿಸಿದರು. ಈ ಬಗ್ಗೆ ಪ್ರತಿಕ್ರಿಯಿಸಿದ ಕೋವಿಂದ್ ದೇವೇಗೌಡ ಅವರ ಸಾಧನೆಯನ್ನು ಮರೆಯಲು ಸಾಧ್ಯವಿಲ್ಲ, ಪ್ರಧಾನಿಯಾಗಿದ್ದ ಅವರ ಕೊಡುಗೆ ದೇಶಕ್ಕೆ, ರಾಜ್ಯಕ್ಕೆ ಅಪಾರ, ಅವರ ಹೆಸರನ್ನು ಉಲ್ಲೇಖಿಸದಿರಲು ಸಾಧ್ಯವಿಲ್ಲ ಎಂದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ