ಶಾಸಕರಿಗೆ ವಂಚಿಸಲು ಯತ್ನ: 6 ಮಂದಿ ಬಂಧನ !

Kannada News

25-10-2017

ಬಳ್ಳಾರಿ: ಕೇಂದ್ರ ವಿಮಾನಯಾನ ಖಾತೆ ಸಚಿವರಾದ, ಅಶೋಕ್ ಗಜಪತಿರಾಜು ಅವರ ಮಗ ಅಂತಾ ಹೇಳಿಕೊಂಡು ಶಾಸಕರಿಗೆ ವಂಚಿಸಲು ಯತ್ನಿಸಿದ್ದ 6 ಮಂದಿಯನ್ನು ಬಳ್ಳಾರಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ಹೊಸಪೇಟೆ ಶಾಸಕ ಆನಂದಸಿಂಗ್ ಅವರ ರೇಂಜ್ ರೋವರ್ ಕಾರು ಪಡೆದು ಪರಾರಿಯಾಗಲು ಯತ್ನಿಸಿದ ರಾಬಿನ್ ಮತ್ತು ಆತನ ಗ್ಯಾಂಗನ್ನು ಪೊಲೀಸರು ಬಂಧಿಸಿದ್ದಾರೆ. ಶಾಸಕರು ನೀಡಿದ ದೂರಿನ ಮೇರೆಗೆ, ರಾಬಿನ್ ಓಡಿಸುತ್ತಿದ್ದ ಸಂಸದ ಅನ್ನೋ ಸ್ಟಿಕ್ಕರ್ ಅಂಟಿಕೊಂಡು ಸೈರನ್ ಹಾಕಿದ್ದ ಇನ್ನೋವಾ ಕಾರನ್ನೂ ಜಪ್ತಿ ಮಾಡಿದ್ದಾರೆ. ಇದೇ ರಾಬಿನ್ ಈ ಹಿಂದೆ ಸಿಂಧನೂರ ಶಾಸಕ ಹಂಪನಗೌಡ ಬಾರ್ದಲಿಗೆ ಆಂಧ್ರ ಡಿಸಿಎಂ ಮಗನೆಂದು ಪರಿಚಯ ಮಾಡಿಕೊಂಡಿದ್ದನು ಎಂದು ತಿಳಿದುಬಂದಿದೆ. ಶಾಸಕರಿಗೆ ಮೋಸ ಮಾಡಲು ಯತ್ನಿಸುತ್ತಿದ್ದ ಭೂಪ ಈಗ ಜೈಲು ಸೇರಿದ್ದಾನೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ