ಗೌರಿ ಹತ್ಯೆ: ಬೈಕ್ ಖರೀದಿ ಸುಳಿವು !

Kannada News

25-10-2017

ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಪ್ರಕರಣಕ್ಕೆ ದಿನಕ್ಕೊಂದು ಸುಳಿವು ಸಿಗುತ್ತಿದ್ದು, ಎಸ್‍ಐಟಿ ತಂಡ ಚುರುಕಾಗಿ ಕಾರ್ಯನಿವಹಿಸುತ್ತಿದೆ. ಹಂತಕರ ಹಿಂದೆ ಬಿದ್ದಿರುವ ಎಸ್‍ಐಟಿಗೆ ಒಂದು ಸ್ಫೋಟಕ ಸುಳಿವು ಸಿಕ್ಕಿದೆ.

ಗೌರಿ ಲಂಕೇಶ್ ಹತ್ಯೆಯ ಸಂದರ್ಭದಲ್ಲಿ ಹಂತಕರು ಬಳಸಿದ್ದ ಬೈಕ್ ಖರೀದಿಯ ಬಗ್ಗೆ ಸುಳಿವು ಸಿಕ್ಕಿದ್ದು, ಮಹಾರಾಷ್ಟ್ರದ ಪುಣೆಯ ಸಣ್ಣ ಹಳ್ಳಿಯೊಂದರಲ್ಲಿ ಸೆಕೆಂಡ್ ಹ್ಯಾಂಡ್ ಪಲ್ಸರ್ ಬೈಕ್ ಅನ್ನು ಖರೀದಿ ಮಾಡಿರುವ ಬಗ್ಗೆ ಮಾಹಿತಿ ದೊರೆತಿದೆ. ಹಂತಕ ಬಂದಿದ್ದ ಬೈಕ್ 150 ಸಿಸಿ ಕಪ್ಪು ಮತ್ತು ಕೆಂಪು ಬಣ್ಣದಾಗಿದೆ. ಖರೀದಿ ಮಾಡಿ ಶಿವಮೊಗ್ಗ ಮೂಲದಿಂದ ಬೈಕ್ ತಂದಿರುವ ಬಗ್ಗೆ ಎಸ್‍ಐಟಿಗೆ ಮಾಹಿತಿ ಲಭ್ಯವಾಗಿದ್ದು, ಎಸ್‍ಐಟಿಯಿಂದ ತೀವ್ರ ಹುಡುಕಾಟ ಶುರುವಾಗಿದೆ. ಇತ್ತೀಚೆಗೆ ಎಸ್‍ಐಟಿ ಗೌರಿ ಹಂತಕರ ರೇಖಾಚಿತ್ರ ಮತ್ತು ವೀಡಿಯೊವನ್ನು ಬಿಡುಗಡೆ ಮಾಡಿದ್ದು, ಸಾರ್ವಜನಿಕರಿಗೆ ಹಂತಕರ ಬಗ್ಗೆ ಸುಳಿವು ನೀಡುವಂತೆ ಮನವಿ ಮಾಡಿಕೊಂಡಿದ್ದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ