ರಾಜ್ಯದಲ್ಲಿ ಕುಟುಂಬ ರಾಜಕಾರಣ..

Kannada News

25-10-2017

ಮುಂಬರಲಿರುವ ವಿಧಾನಸಭೆ ಚುನಾವಣೆಯಲ್ಲಿ ಎಲ್ಲಾ ಪಕ್ಷಗಳಿಂದಲೂ ಕುಟುಂಬ ರಾಜಕಾರಣ ಮಿತಿ ಮೀರುವ ಲಕ್ಷಣಗಳು ಎದ್ದು ಕಾಣುತ್ತಿವೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಪುತ್ರ ಯತೀಂದ್ರ, ಸಚಿವ ಮಹದೇವಪ್ಪ ಪುತ್ರ ಸುನಿಲ್ ಬೋಸ್, ಕಾಗೋಡು ತಿಮ್ಮಪ್ಪ ಪುತ್ರಿ ಡಾ.ನಂದಿನಿ, ಚಿಕ್ಕಪೇಟೆ ಶಾಸಕ ಆರ್.ವಿ.ದೇವರಾಜ್ ಪುತ್ರ ಯುವರಾಜ, ಡಿ.ಕೆ.ಶಿವಕುಮಾರ್ ತನ್ನ ಭಾವನಿಗೆ ಕುಣಿಗಲ್ ಟಿಕೆಟ್, ಕೋಲಾರದ ಮುನಿಯಪ್ಪ ತನ್ನ ಮಗಳಿಗೆ, ಜಾಫರ್ ಷರೀಪ್ ತನ್ನ ಮೊಮ್ಮಗನಿಗೆ, ವಿಧಾನಸಭಾಧ್ಯಕ್ಷ ಕೋಳಿವಾಡ ತನ್ನ ಪುತ್ರ ಪ್ರಕಾಶ್ ಕೋಳಿವಾಡ, ಜಾರಕಿಹೊಳಿ ಕುಟುಂಬದವರು ಕೂಡಾ ಟಿಕೆಟ್ ಕೇಳುತ್ತಿದ್ದಾರೆ.

ಶಾಮನೂರು ಶಿವಶಂಕರಪ್ಪ, ಪ್ರಕಾಶ್ ಹುಕ್ಕೇರಿ, ಡಿ.ಕೆ.ಶಿವಕುಮಾರ್, ದಿವಂಗತ ಮಹದೇವ ಪ್ರಸಾದ್ ಕುಟುಂಬದವರು ಈಗಾಗಲೇ ರಾಜಕೀಯದಲ್ಲಿದ್ದಾರೆ. ಅಲ್ಲದೆ ತಮ್ಮ ನಿಕಟರಿಗೂ ರಕ್ತ ಸಂಬಂಧಿಗಳಿಗೂ ಟಿಕೆಟ್ ಕೇಳುತ್ತಿದ್ದು, ಈ ಪಕ್ಷದ ಕುಟುಂಬ ರಾಜಕಾರಣ ಮತ್ತಷ್ಟು ತೀವ್ರಗೊಳ್ಳುತ್ತಿದೆ.

ಜೆಡಿಎಸ್ ನಿಂದ ಕುಮಾರಸ್ವಾಮಿ(ರಾಮನಗರ) ಅನಿತಾ ಕುಮಾರಸ್ವಾಮಿ(ಚನ್ನಪಟ್ಟಣ) ರೇವಣ್ಣ(ಹೊಳೇನರಸೀಪುರ) ಭವಾನಿ ರೇವಣ್ಣ(ಬೇಲೂರು), ಪ್ರಜ್ವಲ್ ರೇವಣ್ಣ(ರಾಜರಾಜೇಶ್ವರಿ ನಗರ) ನೆಂಟರಾದ ಪ್ರೊ.ರಂಗಪ್ಪ(ಚಾಮರಾಜ), ತಮ್ಮಣ್ಣ(ಮದ್ದೂರು), ಬಾಲಕೃಷ್ಣ(ಹಾಸನ), ಜಿ.ಟಿ.ದೇವೇಗೌಡ ಪುತ್ರ ಹರೀಶ್‍ ಹೀಗೇ ಹಲವರು ಕುಟುಂಬ ರಾಜಕಾರಣಕ್ಕೆ ಸಿದ್ಧರಾಗಿದ್ದಾರೆ.

ಇನ್ನು ಬಿಜೆಪಿಯಲ್ಲಿ ಯಡಿಯೂರಪ್ಪ, ತನ್ನ ಪುತ್ರನಾದ ರಾಘವೇಂದ್ರ, ಈಶ್ವರಪ್ಪ ಪುತ್ರ ಕಾಂತೇಶ್, ಜಗದೀಶ್ ಶೆಟ್ಟರ್ ಸೋದರ, ಉದಾಸಿ ಮತ್ತು ಪುತ್ರ, ಉಮೇಶ್ ಕತ್ತಿ ಮತ್ತು ಸೋದರರು, ಖಂಡ್ರೆ, ಪ್ರಭಾಕರ ಕೋರೆ ಕುಟುಂಬದವರು ರಾಜಕಾರಣದಲ್ಲಿ ತೊಡಗಿದ್ದು, ಇವರೊಡನೆ ಮತ್ತಷ್ಟು ಬಿಜೆಪಿ ಮುಖಂಡರ ಕುಟುಂಬಸ್ಥರು ಈ ಸಲ ಟಿಕೆಟ್‍ಗೆ ತೀವ್ರ ಪೈಪೋಟಿ ನೀಡುತ್ತಿದ್ದಾರೆ. ಒಟ್ಟಿನಲ್ಲಿ ಎಲ್ಲ ಪ್ರಮುಖ ಪಕ್ಷಗಳಲ್ಲೂ ಕುಟುಂಬ ರಾಜಕಾರಣ, ಈ ಸಲ ಹಿಂದೆಂದಿಗಿಂತಲೂ ಹೆಚ್ಚಾಗಿಯೇ ಇದೆ ಎನ್ನಬಹುದು.

ವರದಿ: ಜಿ.ಆರ್.ಸತ್ಯಲಿಂಗರಾಜುಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ