ವಿದ್ಯಾರ್ಥಿಯನ್ನು ಹೊರದಬ್ಬಿದ ಕಂಡಕ್ಟರ್ !

Kannada News

25-10-2017 440

ಮೈಸೂರು: ಬಸ್ ನಿಂದ ವಿದ್ಯಾರ್ಥಿಯೊಬ್ಬರನ್ನು ಬಸ್ ಕಂಡಕ್ಟರ್ ಹೊರದಬ್ಬಿದರಿಂದ, ಹಿಂದೆ ಬರುತ್ತಿದ್ದ ಮತ್ತೊಂದು ಬಸ್ ವಿದ್ಯಾರ್ಥಿಯ ಕಾಲು ಮೇಲೆ ಹರಿದು, ಕಾಲು ಕಳೆದುಕೊಂಡಿರುವ ದಾರುಣ ಘಟನೆ ಮೈಸೂರಿನಲ್ಲಿ ನಡೆದಿದೆ. ಮೈಸೂರಿನ ಸಿಟಿ ಬಸ್ ನಿಲ್ದಾಣದಲ್ಲಿ ಈ ಅಮಾನವೀಯ ಘಟನೆ ಸಂಭವಿಸಿದ್ದು, ಬನ್ನೂರಿನ ಉಲ್ಲೇಖ್ ಪುಟ್ಟಸ್ವಾಮಿ ಕಾಲು ಕಳೆದುಕೊಂಡ ವಿದ್ಯಾರ್ಥಿ.

ಮೈಸೂರಿನ ಸದ್ವಿದ್ಯಾ ಪೌಢಶಾಲೆಯ 9 ನೇ ತರಗತಿಯಲ್ಲಿ ಓದುತ್ತಿದ್ದ ಉಲ್ಲೇಖ್, ಶಾಲೆ ಮುಗಿಸಿಕೊಂಡು ಮನೆಗೆ ತೆರಳಲು ಬಸ್ ಹತ್ತಲು ಮುಂದಾಗಿದ್ದಾನೆ, ಈ ವೇಳೆ, ಪಾಸ್ ಇದೆ ಅಂತಾ ಬಸ್ ಕಂಡಕ್ಟರ್ ಹೊರದಬ್ಬಿದ್ದಾನೆ. ಅದೇ ವೇಳೆಗೆ ಮತ್ತೊಂದು ಬಸ್ ಹತ್ತಲು ಯತ್ನಿಸಿದ್ದಾನೆ, ಈ ವೇಳೆ ಉಲ್ಲೇಖ್ ಹಿಂದಿನಿಂದ ಬರುತ್ತಿದ್ದ ಬಸ್ ನ ಚಕ್ರಕ್ಕೆ ಸಿಲುಕಿ ಕಾಲಿನ ಮೇಲೆ ಬಸ್ ಹರಿದಿದೆ. ಇದರಿಂದ ತೀವ್ರ ಗಾಯಗಳಾಗಿದ್ದು, ಕೂಡಲೆ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸಂಪೂರ್ಣ ನುಜ್ಜಾಗಿದ್ದ ಕಾಲನ್ನು ಶಸ್ತ್ರ ಚಿಕಿತ್ಸೆ ಮೂಲಕ ವೈದ್ಯರು ತೆಗೆದಿದ್ದಾರೆ. ಇನ್ನು ಕಾಲು ಕಳೆದುಕೊಂಡು ನರಳುತ್ತಿರುವ ಉಲ್ಲೇಖ್ ನ ಪೋಷಕರು ಕಂಡಕ್ಟರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕುರಿತಂತೆ ಕೆ.ಎಸ್.ಆರ್.ಟಿ.ಸಿ ಬಸ್ ಕಂಡೆಕ್ಟರ್ ವಿರುದ್ಧ ದೇವರಾಜ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ