ಬೆಳಕಿಗೆ ಬಾರದ ವಿಧಾನಸೌಧ ಪುಸ್ತಕ

Kannada News

24-10-2017

ವಿಧಾನಸೌಧದ ವಜ್ರಮಹೋತ್ಸವ ಸಂದರ್ಭದ ಸಾಕ್ಷ್ಯಚಿತ್ರಗಳ ವಿವಾದ ದೊಡ್ಡ ಸದ್ದು ಮಾಡಿತ್ತು. ಆದರೆ ಇದೇ ವಿಧಾನಸೌಧದ ಕುರಿತಂತೆ ಜಗದೀಶ್ ಶೆಟ್ಟರ್ ವಿಧಾನಸಭಾಧ್ಯಕ್ಷರಾಗಿದ್ದಾಗ ಹೊರತರಲು ಉದ್ದೇಶಿಸಿದ್ದ ಪುಸ್ತಕಗಳೂ ಉಪಯೋಗಕ್ಕೆ ಬಾರದಂತಾಗಿವೆ.

ಪತ್ರಕರ್ತ ಸಿ.ಎಂ.ರಾಮಚಂದ್ರ ಅವರು, ಕರ್ನಾಟಕದ ಕೀರ್ತಿ ಕಳಸ-ಸ್ವಾತಂತ್ರ್ಯದ ಉದಯ ಶಾಲೆ ಎಂಬ ಸಚಿತ್ರ ಪುಸ್ತಕವನ್ನ ವಿಧಾನಸೌಧದ ಕುರಿತಂತೆ ಬರೆದಿದ್ದರು. ಚಂದ್ರಶೇಖರ ಕಂಬಾರ, ನಟ ಶ್ರೀನಾಥ್ ಹಾಗು ಇತರರು ಪುಸ್ತಕ ಸಮಿತಿಯಲ್ಲಿದ್ದರು. ಆದರೆ ಈ ಪುಸ್ತಕದ ಕರ್ತೃವಿಗೆ ಗೌರವ ಸಂಭಾವನೆ ಎಷ್ಟು ಎಂಬುದೇ ತಕರಾರಿಗೀಡಾಗಿತ್ತು. ಕಂಬಾರರು 15 ರಿಂದ 20 ಸಾವಿರ ಕೊಟ್ಟರೆ ಸಾಕು ಎಂದಿದ್ದರಿಂದ ಕೋಪಗೊಂಡ ರಾಮಚಂದ್ರ ಈ ಪುಸ್ತಕ ಕೊಡಲು ಮುಂದಾಗಲಿಲ್ಲ, ಇವರು ಕೇಳಿದಷ್ಟು ಹಣ ಕೊಡಲಾಗಲ್ಲ ಎಂದು ಕೊನೆಗೆ ವಿಧಾನಸಭಾಅಧ್ಯಕ್ಷರಾಗಿದ್ದ ಜಗದೀಶ ಶೆಟ್ಟರ್ ಒಂದೂವರೆ ಲಕ್ಷ ರೂ.ಕೊಡಿಸಿದ್ದರು.

ನಂತರ ಮುದ್ರಣವಾದ ಈ ಪುಸ್ತಕ ಬಿಡುಗಡೆಗೆ ಮುನ್ನವೇ ರಾಮಚಂದ್ರ ಪತ್ರಿಕಾಗೋಷ್ಟಿ ಕರೆದು, ಪುಸ್ತಕದ ಬಗ್ಗೆ ವಿವರಗಳನ್ನು ಹೇಳಿದರು ಎಂಬ ಅಸಮಾಧಾನದ ಜತೆಗೆ, ಈ ಪುಸ್ತಕದಲ್ಲಿ ಹಿಂದಿನ ಅಧಿಕಾರಿಗಳ ಹೆಸರಷ್ಟೇ ಇದೆ, ನಮ್ಮದಿಲ್ಲ ಎಂಬ ಕಾರಣದಿಂದಲು ಅಧಿಕಾರಿಗಳ ವಲಯ ತನ್ನ ಕೈಚಳಕ ತೋರಿ, ಈ ಪುಸ್ತಕ ಲಭ್ಯವಿಲ್ಲದಂತೆ ಮಾಡಿದೆ. ಈ ಸಂಗತಿ ಬಹಿರಂಗವಾಗುತ್ತಿದ್ದಂತೆ ಇನ್ನೇನು ವಿವಾದಗಳಿಗೆ ಎಡೆ ಮಾಡಲಿದೆಯೋ ಕಾದುನೋಡಬೇಕಿದೆ.

ವರದಿ: ಜಿ.ಆರ್.ಸತ್ಯಲಿಂಗರಾಜುಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ