ಜೈಲಲ್ಲೇ ಖೈದಿಯ ಲವ್ವಿಡವ್ವಿ

24-10-2017 268
ಬೆಂಗಳೂರು: ಕಾಲ್ ಸೆಂಟರ್ ಮಹಿಳಾ ಉದ್ಯೋಗಿಯೊಬ್ಬರನ್ನು ಕೊಲೆಗೈದು ಜೀವವಾಧಿ ಶಿಕ್ಷೆಗೆ ಗುರಿಯಾಗಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಖೈದಿ ಶಿವಕುಮಾರ್ ಗೃಹ ರಕ್ಷಕ ದಳದ ಮಹಿಳಾ ಸಿಬ್ಬಂದಿಯ ಜೊತೆ ಲವ್ವಿಡವ್ವಿ ಶುರುಮಾಡಿದ್ದಾನೆ.
ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದ ಶಿವಕುಮಾರ್ ಅಲ್ಲಿನ ಭದ್ರತೆಗೆ ನಿಯೋಜನೆಗೊಂಡಿದ್ದ ಗೃಹ ರಕ್ಷಕದಳದ ಮಹಿಳಾ ಸಿಬ್ಬಂದಿಯೊಬ್ಬರನ್ನು ಪ್ರೀತಿಸುತ್ತಿದ್ದಾನೆ. ಅನಾರೋಗ್ಯದ ನೆಪಮಾಡಿ ಜೈಲಿನಿಂದ ಪೆರೋಲ್ ಮೇಲೆ ಹೊರಬಂದು ಪ್ರೀತಿಸುತ್ತಿರುವ ಗೃಹ ರಕ್ಷಕದಳದ ಮಹಿಳಾ ಸಿಬ್ಬಂದಿಯ ಜೊತೆ ಹೋಟೆಲ್ಗಳಿಗೆ ಹೋಗಿ ಮೋಜು ಮಾಡುತ್ತಿದ್ದಾನೆ.
ಅಲ್ಲದೇ ಜೈಲಿನಿಂದ ಹೊರಬಂದ ನಂತರ ಮತ್ತೊಬ್ಬ ಮಹಿಳೆಯ ಜೊತೆ ಸುತ್ತಾಡುತ್ತಿದ್ದು ಇಬ್ಬರ ಜೊತೆ ತೆಗೆಸಿಕೊಂಡಿರುವ ಫೋಟೋಗಳು ವೈರಲ್ ಆಗಿದ್ದು, ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಶಿವಕುಮಾರ್ ನ ಕೃತ್ಯ ಜೈಲಾಧಿಕಾರಿಗಳಿಗೆ ತಿಳಿದಿಲ್ಲ ಎನ್ನುವುದೇ ಯಕ್ಷ ಪ್ರಶ್ನೆಯಾಗಿದೆ.
2005 ರಲ್ಲಿ ಕಾಲ್ ಸೆಂಟರ್ ಉದ್ಯೋಗಿಯಾಗಿ ಕೆಲಸ ಮಾಡುತ್ತಿದ್ದ ಪ್ರತಿಭಾ ಅವರನ್ನ ಅದೇ ಸೆಂಟರ್ ನಲ್ಲಿ ಕ್ಯಾಬ್ ಡ್ರೈವರ್ ಆಗಿದ್ದ ಶಿವಕುಮಾರ್, ಮಧ್ಯರಾತ್ರಿ ಪಿಕ್ಅಪ್ ಮಾಡಿದ್ದು, ನಂತರ ಆಕೆಯನ್ನು ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಅತ್ಯಾಚಾರವೆಸಗಿ ಕೊಲೆ ಮಾಡಿದ್ದ. ನಂತರ ಕೋರ್ಟ್ ಆತನಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. ಇದೀಗ ಇಲ್ಲಿಯೂ ತನ್ನ ಹಳೇ ಚಾಳಿ ಮುಂದುವರೆಸಿದ್ದಾನೆ.
ಒಂದು ಕಮೆಂಟನ್ನು ಹಾಕಿ