ಮಹಿಳೆಗೆ ಬೆದರಿಕೆ: ಕಾಮುಕ ಅರೆಸ್ಟ್ !

Kannada News

24-10-2017 464

ಬೆಂಗಳೂರು: ಜಾಹೀರಾತು ಕಂಪನಿಯಲ್ಲಿ ಕೆಲಸ ಕೊಡಿಸುವುದಾಗಿ ಮಹಿಳೆಯ ಫೋಟೋ ಪಡೆದು ಅದನ್ನು ಅಶ್ಲೀಲ ಚಿತ್ರಕ್ಕೆ ಅಂಟಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹಾಕುವುದಾಗಿ ಬೆದರಿಸುತ್ತಿದ್ದ ಕಾಮುಕ ಕಮರ್ಷಿಯಲ್ ಸ್ಟ್ರೀಟ್ ಪೊಲೀಸರ ಅತಿಥಿಯಾಗಿದ್ದಾನೆ.

ನಾರಾಯಣ ಪ್ರಭು ಬಂಧಿತ ಆರೋಪಿಯಾಗಿದ್ದಾನೆ. ಇನ್ಫೆಂಟ್ರಿ ರಸ್ತೆಯಲ್ಲಿನ ಫ್ರಾಂಕ್ ಫಿನ್ ಇನ್‍ಸ್ಟಿಟ್ಯೂಟ್‍ನಲ್ಲಿ ಕೆಲಸ ಮಾಡುತ್ತಿದ್ದ ಆರೋಪಿಯು ಕಳೆದ ಮೂರು ತಿಂಗಳ ಹಿಂದೆ ತಮ್ಮ ಕಂಪನಿಗೆ ಕೆಲಸಕ್ಕೆ ಸೇರಿದ್ದ ಮಹಿಳೆಯೊಂದಿಗೆ ಪರಿಚಯ ಮಾಡಿಕೊಂಡಿದ್ದಾನೆ.

ಜಾಹೀರಾತು ಕಂಪನಿಯಲ್ಲಿ ಕೆಲಸ ಕೊಡಿಸೋದಾಗಿ ಮಹಿಳೆಯನ್ನು ನಂಬಿಸಿ ಆಕೆಯ ಫೋಟೋಗಳನ್ನ ಪಡೆದಿದ್ದು, ನನ್ನ ಜೊತೆ ಹಾಸಿಗೆ ಹಂಚಿಕೊಳ್ಳಬೇಕು, ಇಲ್ಲ ಹಣ ಕೊಡಬೇಕು ಇಲ್ಲದಿದ್ದರೆ  ನಿನ್ನ ಫೋಟೋಗಳನ್ನ ಪರಿವರ್ತಿಸಿ ನಗ್ನ ದೇಹಕ್ಕೆ ನಿನ್ನ ಮುಖ ಹಾಕಿ, ಫೇಸ್‍ ಬುಕ್, ವಾಟ್ಸಾಪ್‍ ಗಳಲ್ಲಿ ಹಾಕಿ ನಿನ್ನ ಗಂಡನಿಗೂ ಕಳಿಸುತ್ತೇನೆ ಎಂದು ಹೆದರಿಸಿದ್ದಾನೆ. ಅಲ್ಲದೇ ಒಂದು ಬಾರಿ ಮಹಿಳೆಯ ಪತಿಗೂ ಕರೆ ಮಾಡಿದ್ದಾನೆ. ನೊಂದ ಮಹಿಳೆಯು ನೀಡಿದ ದೂರು ಆಧರಿಸಿ ಆರೋಪಿ ನಾರಾಯಣ ಪ್ರಭುವನ್ನು ಕಮರ್ಷಿಯಲ್ ಪೊಲೀಸರು ಬಂಧಿಸಿ ತನಿಖೆ ಕೈಗೊಂಡಿದ್ದಾರೆ.
ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ