ಕ್ರೀಡಾಪಟು ಮೇಲೆ ಹಲ್ಲೆ, ದರೋಡೆ !

Kannada News

24-10-2017

ತುಮಕೂರು: ಬ್ಯಾಸ್ಕೆಟ್ ಬಾಲ್ ಕ್ರೀಡಾ ಪಟುವನ್ನು ಅಡ್ಡಗಟ್ಟಿದ ದರೋಡೆಕೋರರು, ಆತನ ಮೇಲೆ ಹಲ್ಲೆ ನಡೆಸಿ ಮೊಬೈಲ್ ಹಾಗು 2670 ರೂ.ಹಣ ಹಾಗೂ ಎಟಿಎಂ ಕಾರ್ಡ್ ಕಿತ್ತುಕೊಂಡು  ಪರಾರಿಯಾಗಿರುವ ಘಟನೆ, ತುಮಕೂರಿನ ಹೊಸಬಡಾವಣೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಪತ್ರಕರ್ತ ರಂಗರಾಜ್ ಎಂಬುವರ ಮಗನಾದ ಸಾಗರ್ ಬೆಂಗಳೂರಿನಲ್ಲಿ ನಡೆದ ಬ್ಯಾಸ್ಕೆಟ್ ಬಾಲ್ ಕ್ರೀಡಾಕೂಟದಲ್ಲಿ ಭಾಗವಹಿಸಿ, ರಾತ್ರಿ ರೈಲಿನಲ್ಲಿ ತುಮಕೂರಿಗೆ ಬಂದಿದ್ದಾನೆ. ರೈಲು ಮಧ್ಯರಾತ್ರಿ 1 ಗಂಟೆಗೆ ಬಂದಿದ್ದರಿಂದ ರೈಲ್ವೆ ನಿಲ್ದಾಣದಿಂದ ಮನೆಗೆ ಹೋಗಲು ರೈಲ್ವೆ ಗೂಡ್‍ ಶೆಡ್ ರಸ್ತೆ ಮೂಲಕ ತೆರಳುತ್ತಿದ್ದನು.

ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಕಚೇರಿ ಸಮೀಪ ಸಾಗರ್ ಬರುತ್ತಿದ್ದಂತೆ, ಎರಡು ದ್ವಿಚಕ್ರ ವಾಹನಗಳಲ್ಲಿ ಬಂದ ನಾಲ್ವರು ದರೋಡೆಕೋರರು ಅಡ್ಡಗಟ್ಟಿ ಹಲ್ಲೆ ನಡೆಸಿ ಮೊಬೈಲ್, ಪರ್ಸ್, ವಾಚು, ಎಟಿಎಂ ಕಾರ್ಡ್ ಕಿತ್ತುಕೊಂಡಿದಲ್ಲದೆ, ಈತನನ್ನು ಎಳೆದೊಯ್ಯುತ್ತಿದ್ದರು. ಅಷ್ಟರಲ್ಲಿ ಸಮೀಪದಲ್ಲೇ ಇದ್ದ ಸೆಕ್ಯೂರಿಟಿಗಾರ್ಡ್ ಕೂಗಿಕೊಂಡಿದ್ದಾರೆ. ಈ ವೇಳೆ ದರೋಡೆಕೋರರು ಸಾಗರ್ ನನ್ನು ಬಿಟ್ಟು ಪರಾರಿಯಾಗಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ