ಮೋದಿ v/s ಕಲಾವಿದರು..

Kannada News

24-10-2017

ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಲಾವಿದರು ಅದರಲ್ಲೂ ತಮಿಳು ಚಿತ್ರರಂಗದವರು ಎದ್ದು ನಿಲ್ಲುತ್ತಿರುವುದು ವಿಶೇಷವಾಗಿದೆ.

ಶುರುವಿನಲ್ಲೇ ಬಾಲಿವುಡ್ ನಟರು ದೇಶದಲ್ಲಿ ಶಾಂತಿಯಿಲ್ಲ ಎಂದು ಹೇಳಿದ್ದು, ತೀವ್ರ ವಿವಾದಕ್ಕೆ ಕಾರಣವಾಗಿತ್ತು ಇತ್ತೀಚೆಗಷ್ಟೇ ಪ್ರಕಾಶ್ ರೈ ನೀಡಿದ್ದ ಹೇಳಿಕೆಗಳು ಸಾಕಷ್ಟು ವಾದ ವಿವಾದಗಳಿಗೆ ಎಡೆಮಾಡಿದ್ದವು. ನಟ ಕಮಲ ಹಾಸನ್ ಕೂಡ ಕೇಂದ್ರ ಸರ್ಕಾರದ ನಡೆಗಳ ಬಗ್ಗೆ ಅತೃಪ್ತಿಯನ್ನು ಹೊರಹಾಕಿದ್ದರು. ಇದರ ಮುಂದುವರಿದ ಭಾಗವಾಗಿ ವಿಜಯ್ ನಟನೆಯ `ಮೆರ್ಸೆಲ್' ಸಿನಿಮಾದ ಡೈಲಾಗ್ ವಿಚಾರವಾಗಿ ಮೋದಿ ಬೆಂಬಲಿಗರು ಎತ್ತಿರುವ ವಿವಾದಗಳಿಂದಾಗಿ, ಮತ್ತಷ್ಟು ಕಲಾವಿದರು ಪ್ರಗತಿಪರರು ಮೋದಿ ವಿರುದ್ಧ ನಿಲ್ಲುವಂತಾಗಿಸಿದೆ.

ಜಿಎಸ್‍ಟಿ ಮತ್ತು ಆರೋಗ್ಯ ಸೌಲಭ್ಯ ಕುರಿತಂತೆ 'ಮೆರ್ಸೆಲ್' ಸಿನಿಮಾದಲ್ಲಿ ವಿಜಯ್ ಆಡಿರುವ ಮಾತು ಪ್ರಧಾನಿ ಬೆಂಬಲಿಗರಿಗೆ ಸಹಿಸಿಕೊಳ್ಳಲಾಗುತ್ತಿಲ್ಲ. ಇದೇ ವಿಜಯ್ `ಕತ್ತಿ' ಸಿನಿಮಾದಲ್ಲಿ ಆಗಿನ ಯುಪಿಎ ಸರ್ಕಾರದ ವಿರುದ್ಧದ ಡೈಲಾಗ್ ಹೇಳಿದ್ದರು. ಆದರೆ ಆಗ ಯಾವ ವಿವಾದವೂ ಆಗಿರಲಿಲ್ಲ. ಆದರೀಗ ಸಿನಿಮಾ-ನಾಟಕಗಳಲ್ಲೂ ಮೋದಿ ನಿಲುವುಗಳ ವಿರುದ್ಧ ಮಾತಾಡುವಂತಿಲ್ಲ ಎಂಬ ರೀತಿಯಲ್ಲಿ ವರ್ತಿಸುತ್ತಿರುವುದು ಸಾಂಸ್ಕೃತಿಕ-ಸಾಹಿತ್ಯಕ ಮತ್ತು ಕಲಾವಿದರ ವಲಯದಿಂದ ತೀವ್ರ ಟೀಕೆಗೊಳಗಾಗುತ್ತಿದೆ.

ವಿಜಯ್ ಕ್ರಿಶ್ಚಿಯನ್ ಆಗಿದ್ದು, ಹಿಂದುಗಳ ವಿರುದ್ಧ ಮಾತಾಡುತ್ತಿದ್ದಾರೆ ಎಂಬ ದೂರನ್ನೂ ಮಧುರೈ ಆರಕ್ಷಕರು ದಾಖಲಿಸಿಕೊಂಡಿದ್ದಾರೆ. ಇದು ಕಲಾವಿದ ಬಳಗದಿಂದ ತೀವ್ರ ಆಕ್ಷೇಪಕ್ಕೂ ಕಾರಣವಾಗಿದ್ದು, ರಜಿನಿಕಾಂತ್, ಕಮಲ್‍ಹಾಸನ್ ರಾಜಕೀಯಕ್ಕೆ ಸೇರಲು ಸಜ್ಜಾಗುತ್ತಿರುವಾಗಲೇ ಇಂಥವೆಲ್ಲ ನಡೆಯುತ್ತಿರುವುದು ವಿಶೇಷ. 


ಸಂಬಂಧಿತ ಟ್ಯಾಗ್ಗಳು

Kannada News Karnataka ಪ್ರಧಾನಿ ಮೋದಿ ಕಲಾವಿದರು


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ