ರಾಷ್ಟ್ರಗೀತೆ ಹಾಡದಿದ್ದರೆ ದೇಶದ್ರೋಹಿಗಳೇ..?

Kannada News

24-10-2017

ಚಿತ್ರ ಮಂದಿರಗಳಲ್ಲಿ ರಾಷ್ಟ್ರಗೀತೆಗೆ ಪ್ರೇಕ್ಷಕರೆಲ್ಲ ಎದ್ದು ನಿಂತು ಗೌರವಿಸಬೇಕು ಎಂಬ ಕಡ್ಡಾಯವು ಮುಂದೆ ಐಚ್ಚಿಕವಾಗುವ ಲಕ್ಷಣಗಳಿವೆ.

ಕಳೆದ ನವೆಂಬರ್ 30 ರಂದು ಎದ್ದುನಿಂತು ಗೌರವಿಸಬೇಕು ಎಂದಿದ್ದ ಸರ್ವೋಚ್ಚ ನ್ಯಾಯಾಲಯ ಡಿಸೆಂಬರ್ 30 ರಂದು ಇದರಿಂದ ಅಂಗವಿಕಲರಿಗೆ ವಿನಾಯ್ತಿ ನೀಡಿತ್ತು. ಕೇಂದ್ರ ಸರ್ಕಾರ ಈ ರೀತಿ ಗೌರವಸಲ್ಲಿಸುವುದು ಅಗತ್ಯ ಎಂದು ನ್ಯಾಯಾಲಯಕ್ಕೆ ಪ್ರಮಾಣಪತ್ರ ಸಲ್ಲಿಸಿದ್ದು, ಬಹಿರಂಗವಾಗಿ ಗೌರವ ತೋರಿಸಿದರೆ ಮಾತ್ರವೇ ರಾಷ್ಟ್ರಭಕ್ತಿಯಾಗುತ್ತಾ, ರಾಷ್ಟ್ರಗೀತೆ ಹಾಡದಿದ್ದರೆ ದೇಶದ್ರೋಹಿಗಳಾಗುತ್ತಾರಾ..?  ಇದು ಮುಂದುವರಿಯಬೇಕೆನ್ನುವುದಿದ್ದರೆ ಸರ್ಕಾರ ಏಕೆ ಸುತ್ತೋಲೆ ಹೊರಡಿಸಿಲ್ಲವೆಂದು ಎಂದು ಪ್ರಶ್ನಿಸಿರುವ ನ್ಯಾಯಾಧೀಶರು, ರಾಷ್ಟ್ರಗೀತೆಗೆ ಎದ್ದು ನಿಲ್ಲಬೇಕು ಎಂಬ ಕಡ್ಡಾಯವನ್ನು ಪ್ರಶ್ನಿಸಿದರೆ ರಾಷ್ಟ್ರವಿರೋಧಿ ಎನಿಸಿಕೊಳ್ಳಬೇಕಾಗುತ್ತೆ ಎಂಬ ಹೆದರಿಕೆ ಜನರಲ್ಲಿದೆ. ಶಾರ್ಟ್ಸ್ ಧರಿಸಿಕೊಂಡು ಬರುವಂತಿಲ್ಲ ಎಂಬಿತ್ಯಾದಿಯಾಗಿ ನೈತಿಕ ಪೋಲಿಸ್‍ಗಿರಿ ಮಾಡಿದರೆ ಹೇಗೆ? ಮೂಲಭೂತ ಕರ್ತವ್ಯಗಳ ಅನುಸರಣೆ ಕುರಿತು ನ್ಯಾಯಾಲಯದ ಮೇಲೆ ಜವಾಬ್ದಾರಿ ಹೇರಲಾಗಲ್ಲ. ಮೌಲ್ಯ ರೂಢಿಸಿಕೊಳ್ಳಿ ಎಂದು ಹೇಳಿಕೊಡುವುದು ನ್ಯಾಯಾಲಯದ ಕೆಲಸವಲ್ಲ ಎಂದು ಸ್ಪಷ್ಟವಾಗಿ ಹೇಳಿದೆ.

ಸಧ್ಯದಲ್ಲೇ ನ್ಯಾಯಾಲಯವು ಸಿನಿಮಾ ಮಂದಿರಗಳಲ್ಲಿ ರಾಷ್ಟ್ರಗೀತೆಗೆ ಕಡ್ಡಾಯವಾಗಿ ಎದ್ದುನಿಂತು ಗೌರವ ಸೂಚಿಸಬೇಕು ಎಂಬುದಗ ಬದಲಿಗೆ, ಅವರವರ ಇಚ್ಚೆಗೆ ಅನುಸಾರವಾಗಿ ಎದ್ದುನಿಲ್ಲಬಹುದು ಅಥವಾ ನಿಲ್ಲದಿರಬಹುದು ಎಂಬ ಮಾರ್ಪಾಟನ್ನು ಹೊರಡಿಸುವ ಲಕ್ಷಣಗಳಿವೆ ಎಂದು ಹೇಳಲಾಗುತ್ತಿದೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ