ಕಲಬುರಗಿ ಟು ಬೀದರ್ ಗೆ ರೈಲು ಸಿದ್ಧ !

Kannada News

24-10-2017

ಬೀದರ್: ಹೈದರಾಬಾದ್ ಕರ್ನಾಟಕ ಭಾಗದ ಜನರ ದಶಕದ ಕನಸು ನನಸಾಗೋಕೆ ದಿನಗಣನೆ ಶುರುವಾಗಿದೆ. ಕಲಬುರಗಿ ಹಾಗೂ ಬೀದರ್ ನಡುವಿನ ರೈಲ್ವೆ ಸಂಚಾರಕ್ಕೆ ಇದೇ 29ರಂದು ಪ್ರಧಾನಿ ನರೇಂದ್ರ ಮೋದಿ ಹಸಿರು ನಿಶಾನೆ ನೀಡಲಿದ್ದಾರೆ. ಇದಕ್ಕಾಗಿ ಎಲ್ಲಾ ರೀತಿಯಲ್ಲೂ ಸಿದ್ಧತೆ ಮಾಡಿಕೊಳ್ಳಲಾಗಿದೆ.

ಬೀದರ್-ಕಲಬುರಗಿ ರೈಲು ಮಾರ್ಗ ಹೈದರಾಬಾದ್ ಕರ್ನಾಟಕ ಭಾಗದ ಮಹತ್ವದ ಯೋಜನೆ. ಬರೋಬ್ಬರಿ 110 ಕಿ.ಮೀ ಮಾರ್ಗದ ಈ ಯೋಜನೆ 1999ರಿಂದ ನೆನೆಗುದಿಗೆ ಬಿದ್ದಿತ್ತು..ಈದೀಗ  ಪೂರ್ಣಗೊಂಡಿದೆ. ಬೀದರ್ ನಿಂದ ಕಲಬುರಗಿವರೆಗಿನ ಈ ಮಾರ್ಗದಲ್ಲಿ 13 ರೈಲ್ವೆ ನಿಲ್ದಾಣಗಳು ಬರಲಿವೆ. ಈಗಾಗಲೇ ಬೀದರ್ ನಿಂದ ಹುಮನಾಬಾದ್ ವರೆಗೆ ಸಂಚಾರ ಮುಕ್ತವಾಗಿದ್ದು, ಈ ಮಾರ್ಗದಲ್ಲಿ ರೈಲು ಸಂಚರಿಸುತ್ತಿದೆ. ಕಮಲಾಪುರದಿಂದ ಕಲಬುರಗಿವರೆಗೆ ಬಾಕಿಯಿದ್ದ ಕಾಮಗಾರಿಯೂ ಈಗ ಪೂರ್ಣಗೊಂಡಿದೆ.

ಒಟ್ಟಿನಲ್ಲಿ  ಇದೇ 29ರಂದು ಹೈ-ಕ ಭಾಗದ ಕನಸಿನ ಯೋಜನೆಗೆ ಪ್ರಧಾನಿ ಮೋದಿ ಹಸಿರು ನಿಶಾನೆ ತೋರಲಿದ್ದು. ಈ ಮಾರ್ಗ ಉದ್ಘಾಟನೆಯಿಂದ ದೆಹಲಿ ಪ್ರಯಾಣಿಕರಿಗೆ 7 ಗಂಟೆ ಉಳಿತಾಯವಾದರೆ. ರಾಜ್ಯ ರಾಜಧಾನಿ ಬೆಂಗಳೂರಿಗೆ ಬರೋ ಪ್ರಯಾಣಿಕರಿಗೂ ಅನುಕೂಲವಾಗಲಿದೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ