ಬಿಎಸ್ ವೈ-ಡಿಕೆಶಿ ಫ್ರೆಂಡ್ ಶಿಪ್ ಖತಮ್..?

Kannada News

23-10-2017 865

ಪಕ್ಷ ಬೇರೆಬೇರೆಯದಾದರೇನು ಮಾಜಿ ಸಿಎಂ ಯಡಿಯೂರಪ್ಪ ಮತ್ತು ಡಿ.ಕೆ.ಶಿವಕುಮಾರ್ ಆಪ್ತರು ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿ ಬರುತ್ತವೆ. ಇದಕ್ಕೆ ಪೂರಕವಾಗಿ ಬಿಎಸ್ ವೈ ಅಧಿಕಾರದಲ್ಲಿದ್ದಾಗ ಡಿಕೆಶಿ ಡಿನೋಟಿಫಿಕೇಷನ್ ಮಾಡಿಸಿಕೊಂಡಿದ್ದಾರೆ ಎಂಬ ಪ್ರಕರಣ ಇನ್ನೂ ಇತ್ಯರ್ಥವಾಗಿಲ್ಲ.

ಇತ್ತೀಚೆಗೆ ಡಿಕೆಶಿ ಮನೆ ಮೇಲೆ ಆದಾಯ ತೆರಿಗೆ ದಾಳಿಯಾದಾಗಲೂ, ಯಡಿಯೂರಪ್ಪ ಡಿಕೆಶಿ ಪರವಾಗಿಯೇ ಮಾತಾಡಿದ್ದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಬಿಜೆಪಿ ಅಧ್ಯಕ್ಷ, ಅಮಿತ್ ಷಾ, ರಾಜ್ಯ ಕಾಂಗ್ರೆಸ್ ವಿರುದ್ಧ ಹೋರಾಟ ತೀವ್ರಗೊಳಿಸುವಂತೆ ಆದೇಶಿಸಿದ್ದರು. ಆನಂತರ ಎಚ್ಚುತ್ತುಕೊಂಡಿರುವ ಬಿಎಸ್ ವೈ, ಕಲ್ಲಿದ್ದಲು ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ 418 ಕೋಟಿ ರೂಪಾಯಿ ಅವ್ಯವಹಾರ ನಡೆಸಿದ್ದಾರೆ, ಇದರಲ್ಲಿ ಇಂಧನ ಸಚಿವರ ಪಾತ್ರವೂ ಇದೆ ಎಂದು ಆರೋಪಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ಡಿಕೆಶಿ ಕೂಡ ತಿರುಗೇಟು ನೀಡಿದ್ದಾರೆ.

ಒಟ್ಟಿನಲ್ಲಿ ಇದೀಗ ಪಕ್ಷದ ವರಿಷ್ಟರ ಆದೇಶದ ಮೇರೆಗೆ ಬಿಎಸ್ ವೈ ಅನಿವಾರ್ಯವಾಗಿ ಡಿಕೆಶಿ ವಿರುದ್ಧ ಧ್ವನಿ ಎತ್ತುತ್ತಿದ್ದರೆ, ಸಿಎಂ ಸಿದ್ದರಾಮಯ್ಯ ಮತ್ತು ತನ್ನ ವಿರುದ್ಧದ ಆರೋಪದಿಂದ ಹೊರಬರಲು ಡಿಕೆಶಿ ಕೂಡ ಬಿಎಸ್ ವೈ ವಿರುದ್ಧ ಮಾತಾಡುತ್ತಿದ್ದಾರೆ. ಇದರ ಜೊತೆಗೆ, ತನ್ನ ರಾಜಕೀಯ ವೈರಿ ಸಿ.ಪಿ.ಯೋಗೇಶ್ವರ್ ಅವರನ್ನು ಬಿಜೆಪಿಗೆ ಸೇರಿಸಿಕೊಂಡು ಚನ್ನಪಟ್ಟಣದಲ್ಲಿ ಸ್ಪರ್ಧಿಸಲು ಟಿಕೆಟ್ ಕೊಡುತ್ತಿರುವುದು ಕೂಡ ಡಿ.ಕೆ.ಶಿವಕುಮಾರ್ ಅವರಲ್ಲಿನ ಅತೃಪ್ತಿಯನ್ನು ಹೆಚ್ಚಿಸಿದೆ ಎನ್ನಲಾಗಿದೆ.
ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ