ಮೀನು ತಂದ ಬೇನೆ..?

Kannada News

23-10-2017

ಮೀನೂಟ ಮಾಡಿ ಧರ್ಮಸ್ಥಳದ ಮಂಜುನಾಥ ದೇಗುಲಕ್ಕೆ ಹೋಗಿದ್ದು ಅಪಚಾರವೇ? ಈ ವಿಷಯ ಇದೀಗ ರಾಜ್ಯದಲ್ಲಿ  ಸಾಕಷ್ಟು ಸುದ್ದಿಮಾಡುತ್ತಿದೆ. ಈ ರೀತಿ ಮಾಡಿದ್ದಕ್ಕಾಗಿ ಸಿಎಂ ಸಿದ್ದರಾಮಯ್ಯ ವಿರುದ್ಧ ಟೀಕೆಗಳು ಮತ್ತು ಸಮರ್ಥನೆಗಳು ಎರಡೂ ಕೇಳಿ ಬರುತ್ತಿವೆ. ಮಂಗಳೂರು ಪ್ರವಾಸ ಕೈಗೊಂಡಿದ್ದ ಸಿದ್ದರಾಮಯ್ಯನವರು ಮೀನು ಊಟ ಮಾಡಿದ್ದರು. ಆನಂತರ ನೇರವಾಗಿ ಧರ್ಮಸ್ಥಳದ ಮಂಜುನಾಥನ ದೇಗುಲಕ್ಕೆ ಹೋಗಿದ್ದರು. ಈ ಬಗ್ಗೆ ಸುದ್ದಿ ಹರಡಿ, ತೀವ್ರ ವಿವಾದವನ್ನೇ ಸೃಷ್ಟಿ ಮಾಡಿದೆ. ಸಿಎಂ ಸಿದ್ದರಾಮಯ್ಯನವರು ಮಾಂಸ ತಿಂದು ದೇವಾಲಯಕ್ಕೆ ಹೋಗಿ ಅಪಚಾರ ಎಸಗಿದ್ದಾರೆ ಎಂಬ ಟೀಕೆಗಳು ಕೇಳಿ ಬರುತ್ತಿವೆ.

ನಾವು ದನದ ಮಾಂಸ ತಿಂದರೆ ತಪ್ಪೇನು ಎಂದು ಹೇಳುವ ಸಿದ್ದರಾಮಯ್ಯನವರು,  ಮೀನು ತಿಂದು ದೇಗುಲಕ್ಕೆ ಭೇಟಿ ನೀಡುವ ಮೂಲಕ, ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ಕೆಲವು ಧಾರ್ಮಿಕ ಮುಖಂಡರು ಮತ್ತು ಆರೆಸ್ಸೆಸ್ ನವರು ಆರೋಪಿಸಿದ್ದಾರೆ. ಎರಡು ದಿನಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರು, ಕೇದಾರನಾಥದಲ್ಲಿ ದೇವರಿಗೆ ಬೆನ್ನು ಹಾಕಿ ನಿಂತು ಭಾಷಣ ಮಾಡಿದರು, ಇದು ದೇವರಿಗೆ ಮಾಡಿದ ಅಪಚಾರ ಎಂದು ಕಾಂಗ್ರೆಸ್ಸಿಗರು ಆರೋಪಿಸಿದ್ದರು. ಇದರ ಬೆನ್ನಲ್ಲೇ, ಸಿದ್ದರಾಮಯ್ಯನವರ ವಿರುದ್ಧ ಕೇಳಿ ಬಂದಿರುವ ಈ ಆರೋಪ ಅವರ ಬಗ್ಗೆ ಹುಯಿಲೆಬ್ಬಿಸುವುದಕ್ಕೆ ಅವಕಾಶ ಒದಗಿಸಿಕೊಟ್ಟಿದೆ. ಧರ್ಮಸ್ಥಳದಲ್ಲಿ ಆಣೆ ಪ್ರಮಾಣ ಮಾಡಿದ್ದಕ್ಕೆ ಯಡಿಯೂರಪ್ಪ ಕತೆ ಏನಾಯಿತು? ಈಗ ಸಿದ್ದುಗೂ ಕೂಡ ಅದೇ ರೀತಿ ಆಗುತ್ತೆ ಎಂಬ ಭವಿಷ್ಯದ ಮಾತುಗಳನ್ನೂ ಕೆಲವರು ಹೇಳುತ್ತಿದ್ದಾರೆ.

ವರದಿ: ಜಿ.ಆರ್.ಸತ್ಯಲಿಂಗರಾಜು


ಸಂಬಂಧಿತ ಟ್ಯಾಗ್ಗಳು

Kannada News Karnataka ಧರ್ಮಸ್ಥಳ ಮೀನೂಟ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


Muchas gracias. ?Como puedo iniciar sesion?
  • mblobbvhtc
  • sgtklwwhzj