ಮಗಳನ್ನೇ ಕೊಂದನಾ ಕುಡುಕ ತಂದೆ..?

Kannada News

23-10-2017

ಬೆಂಗಳೂರು: ಯಲಹಂಕದ ಉಪನಗರದ ಕೆಂಪನಹಳ್ಳಿ ಅಂಗವಿಕಲತೆಯಿಂದ ಕೂಡಿ ಅನಾರೋಗ್ಯದಿಂದ ಬಳುತ್ತಿದ್ದ ಮೂರು ವರ್ಷದ ಹೆಣ್ಣು ಮಗು ಶಂಕಾಸ್ಪದವಾಗಿ ಮೃತಪಟ್ಟಿರುವ ದುರ್ಘಟನೆ  ನಿನ್ನೆ ರಾತ್ರಿ ನಡೆದಿದೆ.

ಕೆಂಪನಹಳ್ಳಿಯ ವೀರಸಾಗರ ರಸ್ತೆಯ ಕೊಳಗೇರಿಯ ಶಶಿ ಎನ್ನುವ ಮಗು ಸಂಜೆ ಅನುಮಾನಾಸ್ಪವಾಗಿ ಮೃತಪಟ್ಟಿದ್ದು, ಮಗುವಿನ ತಂದೆ ರವಿ ಕುಡಿದ ಅಮಲಿನಲ್ಲಿ ಮಗುವಿಗೆ ಉಸಿರುಗಟ್ಟಿಸಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಶಶಿ ಅಂಗವಿಕಲಳಾಗಿದ್ದು ಮೂರು ವರ್ಷ ಕಳೆದರೂ ನಡೆದಾಡಲು ಆಗುತ್ತಿರಲಿಲ್ಲ ಅಲ್ಲದೇ ಅನಾರೋಗ್ಯದಿಂದ ಬಳಲುತ್ತಿತ್ತು. ಮೃತ ಮಗುವಿನ ಮೇಲೆ ಯಾವುದೇ ಗಾಯದ ಗುರುತುಗಳು ಕಂಡುಬಂದಿಲ್ಲ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು ವೈದ್ಯಕೀಯ ವರದಿ ಬಂದ ನಂತರ ಸಾವಿನ ಸತ್ಯಾಂಶ ಗೊತ್ತಾಗಲಿದೆ ಎಂದು ಡಿಸಿಪಿ ಗಿರೀಶ್ ತಿಳಿಸಿದ್ದಾರೆ.

ಕೂಲಿ ಕೆಲಸ ಮಾಡುತ್ತಿದ್ದ ರವಿ ಕುಡಿತದ ಚಟ ಅಂಟಿಸಿಕೊಂಡಿದ್ದು, ನಿನ್ನೆ ಸಂಜೆ ಮದ್ಯದ ಅಮಲಿನಲ್ಲಿ ಶಶಿಗೆ ಕುತ್ತಿಗೆ ಹಿಸುಕಿ ಕೊಲೆ ಮಾಡಿದ್ದಾನೆ ಎಂದು ಸ್ಥಳೀಯರು ಆತನಿಗೆ ಆತನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ರವಿಯನ್ನು ವಶಕ್ಕೆ ಪಡೆದುಕೊಂಡಿರುವ ಯಲಹಂಕ ಉಪನಗರ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Kannada News Karnataka ಶಂಕಾಸ್ಪದ ಮೃತ ಮಗು


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ