ಮುಂಜಾನೆ 3 ಗಂಟೆಗೆ ಭೀಕರ ಕೊಲೆ !

Kannada News

23-10-2017

ಬೆಂಗಳೂರು: ನಗರದ ಹೊರವಲಯದ ಹೊಸಕೋಟೆ ಕೆಇಬಿ ವೃತ್ತದ ಬಳಿ ಮಲಗಿದ್ದ ಮಹಿಳೆ ಹಾಗೂ ಪುರುಷನ ತಲೆ ಮೇಲೆ ಕಲ್ಲು ಎತ್ತಿ ಹಾಕಿ, ಭೀಕರವಾಗಿ ಕೊಲೆಗೈದಿರುವ ದಾರುಣ ಘಟನೆ ಇಂದು ಬೆಳಗಿನ ಜಾವ ನಡೆದಿದೆ. ಚಿಂದಿ ಆಯುತಿದ್ದ ರಮೇಶ್(35) ಹಾಗು ಉಮಾ (36) ಕೊಲೆಯಾದವರು, ಮುಂಜಾನೆ 3ರ ವೇಳೆ  ಕೆಇಬಿ ವೃತ್ತದ ಬಳಿ ಮಲಗಿದ್ದ ಇವರಿಬ್ಬರ ಮೇಲೆ ದುಷ್ಕರ್ಮಿಗಳು ತಲೆಯ ಮೇಲೆ ಕಲ್ಲು ಹಾಕಿ ಕೊಲೆ ಮಾಡಿ ಪರಾರಿಯಾಗಿದ್ದಾರೆ.

ಹೊಸಕೋಟೆ ನಗರದ ಕುರುಬರ ಪೇಟೆಯ ಮುನಿನಾರಾಯಣಪ್ಪ ಎಂಬುವರ ಮಗ ರಮೇಶ್ ಕೆಲವು ವರ್ಷಗಳಿಂದ ಚಿಂದಿ ಆಯ್ದುಕೊಂಡು ಅಲ್ಲಿ ಇಲ್ಲಿ ಮಲಗಿ ಜೀವನ ಸಾಗಿಸುತ್ತಿದ್ದರೆ, ಹೊಸಕೋಟೆ ನಗರದ ಖಾಜಿ ಅಂಬ್ರಿಯಾದ ಮಾನಸಿಕ ಅಸ್ವಸ್ಥೆಯಾಗಿದ್ದ ಉಮಾ ಕೆಇಬಿ ಸರ್ಕಲ್ ಬಳಿ ಮಲಗುತ್ತಿದ್ದಳು. ಇಬ್ಬರ ಮೇಲೆ ಕಲ್ಲು ಎತ್ತಿ ಹಾಕಿ ದುಷ್ಕರ್ಮಿಗಳು ಕೊಲೆ ಮಾಡಿದ್ದಾರೆ. ಕೊಲೆಗೆ ಕಾರಣ ತಿಳಿದುಬಂದಿಲ್ಲ. ಇನ್ನು ವಿಷಯ ತಿಳಿಯುತ್ತಿದ್ದಂತೆ, ಸ್ಥಳಕ್ಕೆ ಹೊಸಕೋಟೆ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು, ದುಷ್ಕರ್ಮಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Kannada News Karnataka ಭೀಕರ ಹೊಸಕೋಟೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ