ಹಳೇ ಪೋಟೋ ಬಿಚ್ಚಿಟ್ಟ ಸತ್ಯ !

Kannada News

23-10-2017

ಮೈಸೂರು: ಮೂರು ಮದುವೆಯಾಗಿರುವುದನ್ನು ಮುಚ್ಚಿಟ್ಟು ನಾಲ್ಕನೆ ಮದುವೆಯಾಗಲು ಹೊರಟ ಯೋಧನನೊಬ್ಬ ಮದುವೆ ವೃತ್ತಾಂತ ಹೊರಬಂದಿದ್ದು, ಆತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಸಾಲಿಗ್ರಾಮದ ನಿವಾಸಿಯಾಗಿರುವ ಯೋಧ ಶಿವನಂಜಪ್ಪ ಐದನೇ ಮದುವೆಗೆ ಸಿದ್ದನಾದ ವರ. ಜಮ್ಮುವಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಶಿವನಂಜಪ್ಪ 10 ವರ್ಷದ ಹಿಂದೆ ವರಲಕ್ಷ್ಮೀ ಎಂಬಾಕೆಯನ್ನು ಮದುವೆಯಾಗಿದ್ದ. ಆಕೆಗೆ ವರದಕ್ಷಿಣೆ ಕಿರುಕುಳ ನೀಡಿ ಮತ್ತೊಂದು ಹುಡುಗಿಯನ್ನು ಮದುವೆಯಾಗಿದ್ದದೇ. ಇದೇ ರೀತಿ ಮೂರುಮದುವೆಯಾಗಿದ್ದ ಈತ ನಾಲ್ಕನೆ ಮದುವೆಯಾಗಲು ಸಿದ್ಧನಾಗಿದ್ದ.

ವಿಜಯನಗರದ ಯೋಗಾನರಸಿಂಹ ಸ್ವಾಮಿ ದೇಗುಲದಲ್ಲಿ ನಾಲ್ಕನೆ ಮದುವೆಯಾಗುವ ವೇಳೆ ಶಿವನಂಜಪ್ಪನ ಮೊದಲ ಪತ್ನಿ ಆತನ ಹಳೆಯ ಮದುವೆ ಫೋಟೊಗಳನ್ನು ಕಳುಹಿಸಿ ಆತನ ಮದುವೆ ಪುರಾಣ ಹೊರಹಾಕಿದ್ದಾಳೆ. ಇದರಿಂದಾಗಿ ಮಧುವಿನ ಚಿಕ್ಕಪ್ಪ ಆಗುವ ಮತ್ತೊಂದು ಅನಾಹುತವನ್ನು ತಡೆದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಶಿವನಂಜಪ್ಪನನ್ನು ವಶಕ್ಕೆ ಪಡೆದಿದ್ದಾರೆ. ಮೊದಲೆ ಹೆಂಡತಿಗೆ ವಿಚ್ಛೇದನ ನೀಡಿದ ಪ್ರಕರಣ ಇನ್ನು ನ್ಯಾಯಾಲಯದಲ್ಲಿರಬೇಕಾದರೆ ಮೂರು ಮದುವೆಯಾಗಿ ಮೋಸ ಮಾಡಿರುವ ಪ್ರಕರಣ ಹೊರಬಂದಿದೆ.


ಸಂಬಂಧಿತ ಟ್ಯಾಗ್ಗಳು

Kannada News Karnataka ಯೋಧ ಮೂರು ಮದುವೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ