‘ಇದೇ ಕೊನೆ ಟಿಪ್ಪು ಜಯಂತಿ’ -ಪ್ರತಾಪ್ ಸಿಂಹ

Kannada News

23-10-2017

ಸಿದ್ದು ಸರ್ಕಾರದ ಜೊತೆಯಲ್ಲೇ ಟಿಪ್ಪು ಜಯಂತಿಯೂ ಕೊನೆಯಾಗುತ್ತೆ ಎಂಬ ಭವಿಷ್ಯ ನುಡಿದಿರುವ ಸಂಸದ ಪ್ರತಾಪ ಸಿಂಹ, ಯಾವ ಆದರ್ಶವಿದೆ ಎಂದು ಟಿಪ್ಪು ಜಯಂತಿಯನ್ನು ಆಚರಿಸಲಾಗುತ್ತಿದೆ ಎಂದು ಪ್ರಶ್ನಿಸಿದ್ದಾರೆ.

ಕನ್ನಂಬಾಡಿ ಕಟ್ಟಿದ ನಾಲ್ವಡಿ ಕೃಷ್ಣರಾಜ ಒಡೆಯರ್ ಜಯಂತಿ ಆಚರಿಸದೆ, ಯದು ವಂಶದ ವಿರುದ್ಧವಿರುವ ಸಿದ್ದರಾಮಯ್ಯ ಈ ಸಲ ಮನೆಗೆ ಹೋಗುತ್ತಾರೆ. ಅವರ ಜೊತೆಯಲ್ಲೇ ಟಿಪ್ಪು ಜಯಂತಿಯೂ ನಿಲ್ಲಲಿದೆ ಎಂದರು. ಸರ್ಕಾರದ ವತಿಯಿಂದ ಕಳೆದ ಎರಡು ವರ್ಷಗಳಿಂದ ರಾಜ್ಯಾದ್ಯಂತ ಟಿಪ್ಪು ಜಯಂತಿ ಆಚರಿಸಲಾಗುತ್ತಿದ್ದು, ಈ ಸಲ ಇಂಥ ಯಾವುದೇ ಕಾರ್ಯಕ್ರಮಕ್ಕೆ ಶಿಷ್ಟಾಚಾರವಿದ್ದರೂ, ನನ್ನ ಹೆಸರನ್ನು ಆಹ್ವಾನ ಪತ್ರಿಕೆಯಲ್ಲಿ ಬಳಸಬೇಡಿ ಎಂದು ಕೇಂದ್ರ ಸಚಿವ ಅನಂತಕುಮಾರ ಹೆಗ್ಡೆ ಹೇಳಿರುವುದನ್ನ ಇಲ್ಲಿ ನೆನೆಯಬಹುದು.

ಟಿಪ್ಪು  ಜಯಂತಿ ವಿರುದ್ಧ ಬಿಜೆಪಿ ಯುವಮೋರ್ಚಾ ವತಿಯಿಂದ ಹೋರಾಟ ಹಮ್ಮಿಕೊಳ್ಳುವ ಎಚ್ಚರಿಕೆಯನ್ನು ಪ್ರತಾಪ್ ಸಿಂಹ ನೀಡಿದ್ದು, ಚುನಾವಣಾ ವರ್ಷವಾಗಿರುವ ಹಿನ್ನೆಲೆಯಲ್ಲಿ ಬಿಜೆಪಿ ಈ ವಿಷಯವನ್ನು ಗಂಭೀರವಾಗಿ ತೆಗೆದುಕೊಳ್ಳುವ ಮುನ್ಸೂಚನೆಯಾಗಿದೆ ಎನ್ನಲಾಗಿದೆ.

ವರದಿ: ಜಿ.ಆರ್.ಸತ್ಯಲಿಂಗರಾಜುಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ