ಒರಿಜಿನಲ್ ಇದ್ರಷ್ಟೇ ವ್ಯವಹಾರ…!

Kannada News

23-10-2017

ನೀವೇನಾದ್ರೂ ಬ್ಯಾಂಕಿನಲ್ಲಿ ಐವತ್ತು ಸಾವಿರ ರೂಪಾಯಿ ಕ್ಯಾಷ್  ಡಿಪಾಸಿಟ್ ಮಾಡೋದಕ್ಕೆ ಹೋಗ್ತಿದ್ದೀರಾ? ಅಥವ ಡ್ರಾ ಮಾಡೋದಕ್ಕೆ ಹೋಗ್ತಿದೀರಾ? ಹಾಗಿದ್ರೆ ಒಂದೇ ಒಂದು ನಿಮಿಷ ತಡೀರಿ…ನಿಮ್ಮ ಹತ್ರ ಇರೋ ಆಧಾರ್ ಕಾರ್ಡ್, ಡ್ರೈವಿಂಗ್ ಲೈಸನ್ಸ್ ಅಥವ ಪಾಸ್ಪೋರ್ಟ್ ಅಥವ ನಿಮ್ಮ ಗುರುತನ್ನು ನೀವೇ ಎಂದು ಸಾಧಿಸಲು ಇರುವ ಇತರೆ ಅಧಿಕೃತ ಐಡೆಂಟಿಟಿ ಕಾರ್ಡಿನ ಒರಿಜಿನಲ್ ಪ್ರತಿ ತೆಗೆದುಕೊಂಡು ಬ್ಯಾಂಕಿಗೆ ಹೋಗಿ. ಇಲ್ಲವಾದರೆ, ಬ್ಯಾಂಕಿನವರು ನಿಮ್ಮ ಕ್ಯಾಷ್ ಡಿಪಾಸಿಟ್ ತಗೋಳಲ್ಲ, ಅಥವ ನಿಮಗೆ ಕ್ಯಾಷ್ ಕೊಡೋದಿಲ್ಲ. ನೀವು ಒರಿಜಿನಲ್ ಅಥವ ಮೂಲ ದಾಖಲೆಗೆ ಬದಲಾಗಿ ಜಿರಾಕ್ಸ್ ಕಾಪಿ ತೆಗೆದುಕೊಂಡು ಹೋದರೆ ಏನೂ ಪ್ರಯೋಜನ ಆಗುವುದಿಲ್ಲ.

ಈ ವಿಚಾರವಾಗಿ ಕೇಂದ್ರ ಸರ್ಕಾರ ಬ್ಯಾಂಕುಗಳಿಗೆ ಮತ್ತು ಹಣಕಾಸು ಸಂಸ್ಥೆಗಳಿಗೆ ಸೂಚನೆ ನೀಡಿದೆ. ನಿಮ್ಮ ಗುರುತುಪತ್ರದ ಒರಿಜಿನಲ್ ನೋಡಿ ಖಾತ್ರಿ ಪಡಿಸಿಕೊಂಡ ಬಳಿಕವೇ 50 ಸಾವಿರ ರೂಪಾಯಿಗಳಿಗಿಂತ ಹೆಚ್ಚು ನಗದು ವ್ಯವಹಾರಕ್ಕೆ ಅವಕಾಶ ನೀಡಲಾಗುತ್ತದೆ. ಇದು, ಬ್ಲಾಕ್ ಮನಿ ಅಥವ ಕಪ್ಪು ಹಣದ ಹರಿದಾಟ ನಿಯಂತ್ರಿಸಲು ಮೋದಿ ಸರ್ಕಾರ ಕೈಗೊಂಡಿರುವ ಮತ್ತೊಂದು ಕ್ರಮ ಎಂದು ಹೇಳಲಾಗುತ್ತಿದೆ.

ಒಂದು ವೇಳೆ, ನಿಮ್ಮ ಗುರುತು ಪತ್ರದಲ್ಲಿನ ಅಡ್ರೆಸ್ ಬದಲಾಗಿದ್ದರೆ, ನೀವು ಹಾಲಿ ವಾಸವಿರುವ ಮನೆಯ ಎಲೆಕ್ಟ್ರಿಕ್ ಬಿಲ್, ಫೋನ್ ಬಿಲ್ ಅಥವ ಎಲ್ಪಿಜಿ ಡಿಲಿವರಿ ಚೀಟಿಯನ್ನು ಒರಿಜಿನಲ್ ಗುರುತು ಪತ್ರದ ಜೊತೆಗೆ ತೋರಿಸಬಹುದು. ಆದರೆ, ಇವು ಎರಡು ತಿಂಗಳಿನಿಂದ ಈಚೆಗೆ ಪಡೆದಿರುವ ಬಿಲ್ ಗಳಾಗಿರಬೇಕು ಅಷ್ಟೇ..ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ