ಅಜ್ಜಿ ಪ್ರಾಣ ಕಸಿದ ಹಳೇ ಮನೆ !

Kannada News

23-10-2017

ತುಮಕೂರು: ಮನೆಯ ಮೇಲ್ಛಾವಣಿ‌ ಕುಸಿದು ವೃದ್ಧೆ ಸಾವನ್ನಪ್ಪಿದ ಘಟನೆ ತುಮಕೂರು ಜಿಲ್ಲೆಯ ಮಧುಗಿರಿ ತಾಲ್ಲೂಕಿನ ತಿಪ್ಪಾಪುರದಲ್ಲಿ ನಡೆದಿದೆ. ಲಕ್ಷ್ಮಮ್ಮ (85) ಸಾವಿಗೀಡಾದ ವೃದ್ಧೆ . ಹಳೆಯ ಮನೆಯಲ್ಲಿ ವಾಸವಿದ್ದ ಲಕ್ಷ್ಮಮ್ಮ ಅವರ ಮನೆ ಸಂಪೂರ್ಣ ಶಿಥಿಲಾವಸ್ಥೆಗೆ ತಲುಪಿತ್ತು, ಪರಿಣಾಮವಾಗಿ ಮೇಲ್ಛಾವಣಿ ಕುಸಿದಿದೆ. ಕುಸಿದ ಛಾವಣಿ ಅವಶೇಷಗಳ ಅಡಿ ವೃದ್ಧೆ ಲಕ್ಷ್ಮಮ್ಮ ಸಿಲುಕಿ ಅಸುನೀಗಿದ್ದಾರೆ. ಈ ಸಂಬಂಧ ಕೊಡಿಗೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ